
ಅಥಣಿ :ಜು.14: ಅಖಿಲ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ಕಳೆದ ಮೇ ತಿಂಗಳಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಅಥಣಿ ತಾಲೂಕಿನ ಜನವಾಡ ಗ್ರಾಮದ ನಿವಾಸಿ ಸಾಹೇಬಲಾಲ ಮಹ್ಮದ್ ಕಮಾಲನವರ ಉತ್ತಮ ಅಂಕ ಗಳಿಸುವ ಮೂಲಕ ತೇರ್ಗಡೆಯಾದ ಕಾರಣ ಚಿಕ್ಕೋಡಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಸ್ಲಮ್ ನಾಲಬಂದ ಅವರು ಸನ್ಮಾನಿಸಿ ಗೌರವಿಸಿದರು,
ಈ ವೇಳೆ ಚಿಕ್ಕೋಡಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಸ್ಲಮ್ ನಾಲಬಂದ ಮಾತನಾಡಿ ನಮ್ಮ ಸಮಾಜದಲ್ಲಿ ಈ ಹಿಂದೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತೀರಲಿಲ್ಲಾ ಈಗ ಕಾಲ ಬದಲಾದಂತೆ ನಮ್ಮ ಸಮಾಜದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿದ್ದು ಎಲ್ಲರೂ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಹೀಗೆ ಎಲ್ಲ ಮುಸಲ್ಮಾನ್ ಬಾಂಧವರು ತಮ್ಮ ಮಕ್ಕಳಿಗೆ ಗಂಡು ಹೆಣ್ಣು ಎಂಬ ಭೇದಭಾವವಿಲ್ಲದೆ ವಿದ್ಯೆಯನ್ನ ಕಲಿಸಲು ಮುಂದಾದರು ಎಂದರು,
ಈ ವೇಳೆ ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಅಯಾಜ ಮಾಸ್ಟರ್, ಹಸನ ಸನದಿ, ವಿಜಯ ಬಡಚಿ, ಕುಮಾರ ಐದಣ್ಣವರ, ಯೂಸುಫ್ ಮುಲ್ಲಾ, ಸೇರಿದಂತೆ ಹಲವರು ಉಪಸ್ಥಿತರಿದ್ದರು,