ಸಿ ಎಸ್ ಪುರದಲ್ಲಿ ಡಾ.ವಿಷ್ಣು ಹುಟ್ಟುಹಬ್ಬ.

ಕೂಡ್ಲಿಗಿ.ಸೆ. 19 :-  ಅನೇಕ ವಿಷ್ಣು ಅಭಿಮಾನಿ ಬಳಗವಿರುವ ತಾಲೂಕಿನ ಚಂದ್ರಶೇಖರಪುರದಲ್ಲಿ ಡಾ. ವಿಷ್ಣುವರ್ಧನ್ ರವರ ಪುತ್ತಳಿ ನಿರ್ಮಿಸಲಾಗಿದ್ದು ಅದರ ಮುಂದೆ ವಿಷ್ಣು ಸೇನಾ ಸಮಿತಿ ಅಭಿಮಾನಿಗಳು ಸೇರಿ ಶನಿವಾರ ದಿವಂಗತ ಡಾ ವಿಷ್ಣು ರವರ 71ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಆಚರಿಸಿದರು.  
ವಿಷ್ಣುಸೇನಾ ಸಮಿತಿ ಅಧ್ಯಕ್ಷರಾದ ಮಲಿಯಪ್ಪ, ಮಲ್ಲಿಕಾರ್ಜುನ ಸೇರಿದಂತೆ ಅನೇಕ ವಿಷ್ಣುವರ್ಧನ್ ಅಭಿಮಾನಿಗಳು, ಗ್ರಾಮದ ಮುಖಂಡರು ಭಾಗವಹಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿ ಶುಭಕೋರುವ ಮೂಲಕ ವಿಷ್ಣು ಹುಟ್ಟುಹಬ್ಬಕ್ಕೆ ಮೆರಗುತಂದರು.