ಕಲಬುರಗಿ,ಜೂ.16-ವಿಜಯಪುರದ ತನು ಫೌಂಡೇಶನ್ ಹಾಗೂ ವಿಜಯ ವೈಭವ ಪ್ರಕಾಶನಗಳ ಸಹಯೋಗದಲ್ಲಿ ಮಹಾ ರಕ್ತದಾನಿ ದಿ.ಮಲ್ಲಿಕಾರ್ಜುನ ಕಾಳಶೆಟ್ಟಿ ಅವರ ಸ್ಮರಣಾರ್ಥವಾಗಿ ಆಯೋಜಿಸಲಾದ 2023 ನೇ ಸಾಲಿನ ರಾಜ್ಯಮಟ್ಟದ ಯುಗಾದಿ ಹಬ್ಬದ ಕಥಾ ಸ್ಪರ್ಧೆಯಲ್ಲಿ ಕಲಬುರಗಿ ನಗರದ ಇಂಗ್ಲಿಷ ಪ್ರಾಧ್ಯಾಪಕ ಹಾಗೂ ನಾಡಿನ ಪ್ರಮುಖ ಕಥೆಗಾರರಾದ ಸಿ.ಎಸ್.ಆನಂದ ಅವರು ರಚಿಸಿದ “ಒಡಲ ಬಯಕೆ” ಕಥೆಗೆ ಪ್ರಥಮ ಬಹುಮಾನ ಲಭಿಸಿದೆ.
ಬಹುಮಾನವು ಐದು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ತನು ಫೌಂಡೇಶನ್ ಅಧ್ಯಕ್ಷರಾದ ವಿಜಯಕುಮಾರ ಕಾಳಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.