ಬೀದರ್:ಜೂ.26: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷಗಳಾಗಿರುವ ಹಿನ್ನಲೆಯಲ್ಲಿ ಪಕ್ಷದ ನಿರ್ದೇಶನದಂತೆ ನಿನ್ನೆ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಬಿಜೆಪಿ ಜಿಲ್ಲಾದ್ಯಕ್ಷ ಶಿವಾನಂದ ಮಂಠಾಳಕರ್ ನೇತೃತ್ವದಲ್ಲಿ “ಸಂಪರ್ಕ ಸೇ ಸಮರ್ಥನ್ ಅಭಿಯಾನದ” ಮೂಲಕ “ವಿಕಾಸ ತಿರ್ಥ” ಕಾರ್ಯಕ್ರಮದಡಿ ಅಭಿವೃದ್ದಿ ಕಾಮಗಾರಿ ಹಾಗೂ ಪ್ರಗತಿಯಲ್ಲಿರುವ ಅಭಿವೃದ್ದಿ ಕಾಮಗಾರಿ ವಿಕ್ಷಿಸಿದರು.
ಈ ನಿಟ್ಟಿನಲ್ಲಿ 94 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡು ಸಾರ್ವಜನಿಕರ ಸೌಲಭ್ಯಕ್ಕೆ ಬಳಕೆಯಾಗುತ್ತಿರುವ ನೌಬಾದ – ಕೊಳಾರ್ ಔಟರ್ ರಿಂಗ್ ರೋಡ್ (ರಾಷ್ಟ್ರೀಯ ಹೆದ್ದಾರಿ) ವಿಕ್ಷಿಸಿ, ಸುಮಾರು 1 ಕಿಮೀ ಸದರಿ ರಸ್ತೆಯ ಮೇಲೆ ಮುಖಂಡರೊಂದಿಗೆ ನಡೆದುಕೊಂಡು ಹೊಗಿ ಕಾಮಗಾರಿಯ ಬಗ್ಗೆ ಚರ್ಚಿಸಿದರು.
ನಂತರ ನಗರದಲ್ಲಿ ರೂ. 175 ಕೋಟಿ ಅನುದಾನದಲ್ಲಿ ಪೈಪುಗಳ ಮೂಲಕ ಎಲ್.ಪಿ.ಜಿ. ಸರಬರಾಜು ಮಾಡುವ ಸಿ.ಎನ್.ಜಿ ಯೋಜನೆಯ ಕಾಮಗಾರಿಯ ಪ್ರಗತಿಯನ್ನು ವಿಕ್ಷಿಸಿದರು. ನಂತರ ಮಾತನಾಡಿದ ಸಚಿವರು, ಮೋದಿಜಿಯವರ ನೇತೃತ್ವದಲ್ಲಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಐತಿಹಾಸಿಕ ಅಭಿವೃದ್ದಿ ಕಾಮಗಾರಿಗಳು ಆಗಿವೆ, ಜನತೆ ಕೂಡ ಸದೂಪಯೋಗ ಪಡೆದುಕೊಂಡು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ, ಕ್ಷೇತ್ರದ ಜನತೆ ನಮ್ಮ ಸರ್ಕಾರದ ಅಭಿವೃದ್ದಿ ಕಾರ್ಯಗಳಿಗೆ ಸಹಕರಿಸುವದರೊಂದಿಗೆ, ಜನತೆ ಸ್ವತಃ ಪ್ರಚಾರ ಮಾಡುತ್ತಿದ್ದಾರೆ, ಇದೊಂದು ಸಂತೋಷದಾಯಕವಾದ ವಿಷಯ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಬುಡಾ ಮಾಜಿ ಅಧ್ಯಕ್ಷ ಬಾಬುವಾಲಿ, ಬೀದರ ನಗರ ಅಧ್ಯಕ್ಷ ಶಶಿಧರ ಹೊಸಳ್ಳಿ, ಗ್ರಾಮೀಣ ಅಧ್ಯಕ್ಷ ರಾಜು ಪೂಜಾರಿ, ಮುಖಂಡರಾದ ಗುರುನಾಥ ಕೊಳ್ಳುರ, ಅರಿಹಂತ ಸಾವಳೆ, ಅಶೋಕ ಪಾಟೀಲ್, ಹೆಮಾ ತುಕ್ಕಾರಡ್ಡಿ, ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ರಾಜು ಚಿದ್ರಿ, ಮಹೇಶ ಪಾಲಂ, ರಾಜು ಪಾಟೀಲ್, ಅಣೆಪ್ಪ ಖಾನಾಪೂರೆ ಇತರರು ಉಪಸ್ಥಿತರಿದ್ದರು.