ಸಿ.ಎನ್.ಜಿ.ಇಂಜಿನಿಗೆ ಬದಲಾದರೆ ಉಚಿತ ಗ್ಯಾಸ್ ಫಿಲ್ಲಿಂಗ್..!


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.07: ದೇಶದ ಪ್ರಮುಖ ಇಂಧನ ಕಂಪನಿ ಭಾರತ್ ಪೆಟ್ರೋಲಿಯಂ ಪ್ರೈವೇಟ್ ಲಿಮಿಟೆಡ್ ನಿಂದ  ಜನರಿಗೆ  ಸಿ.ಎನ್.ಜಿ. ಗ್ಯಾಸ್ ಬಗ್ಗೆ ಜಾಗೃತಿ ಮೂಡಿಸುವ ಮತ್ತು ವಿಶೇಷ ರಿಯಾಯಿತಿಯನ್ನು ಪ್ರಾರಂಭಿಸಿರುವ ಬಗ್ಗೆ  ತಿಳಿಸಲಾಯ್ತು.
ನಗರದ ಭಾರತ್ ಪೆಟ್ರೋಲಿಯಂ ಉತ್ಪನ್ನ ಮಾರಾಟ ಕೇಂದ್ರ ಹಾವಿನಾಳ ಬಸಣ್ಣ ಎಂಟರ್ಪ್ರೈಸಸ್ ನ ಪೆಟ್ರೋಲ್ ಬಂಕ್ ನಲ್ಲಿ ಈ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮದಲ್ಲಿ  ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಸನ್ನಿ ಜೊಸೆಫ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಕಾರ್ಬನ್ ಹೊಗೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮತ್ತು ಸಿ.ಎನ್.ಜಿ.ಗ್ಯಾಸ್ ಉತ್ತೇಜಿಸುವ ನಿಟ್ಟಿನಲ್ಲಿ ಸುಮಾರು ಎರಡು ಸಾವಿರ ಐದು ನೂರು ರೂ.ಗಳ ಮೌಲ್ಯದ ಗ್ಯಾಸ್ ಇಂಧನವನ್ನು ಉಚಿತವಾಗಿ ನೀಡಲಾಗುತ್ತದೆ.
ಯಾವುದೇ ರೀತಿಯ ಹೊಸ ನಾಲ್ಕು ಮತ್ತು ಆಟೋ ರಿಕ್ಷಾಗಳು ಮತ್ತು ಹಳೆಯ ಪೆಟ್ರೋಲ್ ಹಾಗೂ ಡಿಸೇಲ್ ವಾಹನಗಳು ಸಿ.ಎನ್.ಜಿ. ಗೆ ಬದಲಾವಣೆ ಯಾದರೆ ಈ ರಿಯಾತಿಯನ್ನು ಪಡೆಯಬಹುದು‌.
ಈ ರಿಯಾಯಿತಿ ಕೊಡುಗೆಯು ಮುಂದಿನ ಜುಲೈ ತಿಂಗಳ ವರೆಗೆ ಇರಲಿದ್ದು, ವಾಹನ ಸವಾರರು  ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಹುಂಡೇಕರ್ ರಾಜೇಶ್, ಪೆಟ್ರೋಲ್ ಬಂಕ್ ಮಾಲೀಕ ಹಾವಿನಾಳ್ ಬಸವರಾಜ್, ರಾಮಾರಾಜ್, ಲಕ್ಷ್ಮೀಷ, ರಂಗನಾಥ ಸೇರಿದಂತೆ ವಾಹನಗಳ ಮಾಲೀಕರು ಉಪಸ್ಥಿತರಿದ್ದರು.