ಸಿ.ಎಂ ವಿರುದ್ಧ ಪ್ರತಾಪ್ ಸಿಂಹ ಕೋಪ ಪ್ರದರ್ಶನ

ಮೈಸೂರು,ಜು.20:- ಬೆಂಗಳೂರಿನ ವಿಧಾನಸೌಧದಲ್ಲಿ ನಿನ್ನೆ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹರಿಗಾದ ಅವಮಾನ ಅಷ್ಟಿಷ್ಟಲ್ಲ.
ದಸರಾಗೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಸಿಎಂಗೆ ಮನವಿ ಪತ್ರವೊಂದನ್ನ ನೀಡಿದ್ರು. ಅದನ್ನ ಓದುತ್ತಿದ್ದಂತೆ ಬೊಮ್ಮಯಿಯವರು ಕೋಪಗೊಂಡು ಮನವಿ ಪತ್ರವನ್ನ ಪ್ರತಾಪ್ ಸಿಂಹರ ವಾಪಸ್ ಕೊಟ್ಟರು. ಇದರಿಂದ ತೀವ್ರ ಮುಜುಗರ ಅನುಭವಿಸಿದ ಪ್ರತಾಪ್ ಸಿಂಹಗೆ ಅವಮಾನ ಆಯ್ತು. ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಮತ್ತೆ ಸಿಎಂ ಕೈಗೆ ಮನವಿ ಪತ್ರ ಕೊಟ್ರು.ಇದರಿಂದ ಮತ್ತಷ್ಟು ಕೋಪಗೊಂಡ ಬಸವರಾಜ ಬೊಮ್ಮಿಯಿಯವರು ಇಂತಹ ಬುದ್ಧಿವಂತರ ಜೊತೆ ಕೆಲಸ ಮಾಡುವುದು ಕಷ್ಟ ಎಂದು ವ್ಯಂಗ್ಯವಾಡಿದ್ರು. ಇದರಿಂದ ಅವಮಾನಿತರಾದ ಪ್ರತಾಪ್ ಸಿಂಹ ಸಿಎಂ ರತ್ತ ತಲೆ ಹಾಕಲಿಲ್ಲ.
ಪ್ರಧಾನಿ ಮೋದಿಯವರು ಮೈಸೂರಿಗೆ ಬಂದಾಗ ಪ್ರತಾಪ್ ಸಿಂಹರತ್ತ್ತ ತಿರುಗಿಯೂ ನೋಡಲಿಲ್ಲ. ಈಗ ಮತ್ತೆ ಸಿಎಂ ಪ್ರತಾಪ್ ಸಿಂಹರ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ಮಹಾರಾಜರು ಬಿಟ್ಟರೆ ಮೈಸೂರು ಅಭಿವೃದ್ಧಿ ಮಾಡಿದ್ದು ನಾನೇ ಎಂದು ಜಂಭ ಕೊಟ್ಟಿಕೊಳ್ಳುವ ಪ್ರತಾಪ್ ಸಿಂಹರಿಗೆ ಒಂದಾದರ ಮೇಲೆ ಒಂದರಂತೆ ಹೊಡೆತಗಳು ಬೀಳುತ್ತಿವೆ.
ಇದರಿಂದ ಸಹಜವಾಗಿಯೇ ಪ್ರತಾಪ್ ಸಿಂಹ ಕೋಪ ನೆತ್ತಿಗೇರಿದೆ. ಮೈಸೂರಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ನಾಯಿ ಅವರ ಯಾವ ಕಾರ್ಯಕ್ರಮಕ್ಕೂ ಬಾರದೆ ಪ್ರತಾಪ್ ಸಿಂಹ ತಮ್ಮ ಕೋಪ ಪ್ರದರ್ಶಿಸಿದರು.