ಸಿ.ಎಂ.ಗೆ ಮನವಿ


ನವಲಗುಂದ,ಸೆ.10: ಮಹದಾಯಿ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿಯಿಂದ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಳಸಾ-ಬಂಡೂರಿ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕು, ರೈತರ ಸಾಲಮನ್ನಾ, ನವಲಗುಂದ ತಾಲ್ಲೂಕನ್ನು ಬರಗಾಲ ಘೋಷಣೆ, ಬೆಳೆವಿಮೆ ಮತ್ತು ಬೆಳೆಪರಿಹಾರ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಎಸ್. ಬಿ. ಪಾಟೀಲ, ಮಲ್ಲೇಶ ಉಪ್ಪಾರ, ಸಿದ್ದಲಿಂಗಪ್ಪ ಹಳ್ಳದ, ಬಸನಗೌಡ ಹುಣಸಿಕಟ್ಟೆ, ಮಲ್ಲಪ್ಪ ಬಸೆಗೊಣ್ಣವರ, ಮುರಗೇಪ್ಪ ಪಲ್ಲೇದ, ಗೋವಿಂದರೆಡ್ಡಿ ಮೊರಬದ, ಬಸಪ್ಪ ಜಲಾದಿ, ಪರಪ್ಪ ಲಗಳಿ, ದೇವಪ್ಪ ನೀರಲಗಿ ಅನೇಕ ರೈತರು ಹಾಜರಿದ್ದರು.