ಸಿ.ಎಂ. ಉದಾಸಿ ನಿಧನಕ್ಕೆ ಕವಟಿಗಿ ತೀವ್ರ ಸಂತಾಪ

ವಿಜಯಪುರ, ಜೂ.9-ನಮ್ಮ ಪಕ್ಷದ ಹಿರಿಯ ನಾಯಕರು, ಸಜ್ಜನ ರಾಜಕಾರಣಿ, ಅಜಾತಶತ್ರು, 5 ದಶಕಗಳ ಕಾಲ ತಮ್ಮ ರಾಜಕೀಯ ಜೀವನದಲ್ಲಿ ಅನೇಕರಿಗೆ ಮಾರ್ಗದರ್ಶಕರಾಗಿದ್ದ, ಮಾಜಿ ಸಚಿವರೂ ಮತ್ತು ಪ್ರಸ್ತುತ ಹಾನಗಲ್ ಮತಕ್ಷೇತ್ರದ ಶಾಸಕರಾದ ಶ್ರೀ ಸಿ ಎಮ್ ಉದಾಸಿ ಯವರು ನಿಧನರಾಗಿದ್ದು ಅತೀವ ದುಃಖವನ್ನು ತರಿಸಿದೆ. ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿಕೊಳ್ಳುತ್ತೆನೆ.
ಇಹಲೋಕ ತ್ಯಜಿಸಿದ ಬಿಜೆಪಿ ಹಿರಿಯ ನಾಯಕ ಸಿ.ಎಮ್. ಉದಾಸಿ ಅವರ ನಿಧನಕ್ಕೆ ತೀವ್ರ ಸಂತಾಪಗಳು.
ರಮೇಶ ಜಿಗಜಿಣಗಿ ತೀವ್ರ ಸಂತಾಪಃ ಹಾನಗಲ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಶ್ರೀ ಸಿ.ಎಮ್. ಉದಾಸಿ ಅವರು ವಿಧಿವಶರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ನೋವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಿ, ಕುಟುಂಬಸ್ಥರು ಹಾಗೂ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುವೆ. ಸಂಸದರಾದ ರಮೇಶ ಜಿಗಜಿಣಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ಆರ್‍ಎಸ್ ಪಾಟೀಲ ಕೂಚಬಾಳ ಸಂತಾಪಃ ಮಾಜಿ ಸಚಿವರು, ಬಿಜೆಪಿಯ ಹಿರಿಯ ಮುಖಂಡರು, ಹಾನಗಲ್‍ನ ಶಾಸಕರಾಗಿದ್ದ ಸಿ.ಎಂ.ಉದಾಸಿ ಯವರ ಅಕಾಲಿಕ ನಿಧನ ನೋವನ್ನುಂಟು ಮಾಡಿದೆ.ಅವರ ಕುಟುಂಬ ವರ್ಗ, ಅಪಾರ ಅಭಿಮಾನಿ ವೃಂದಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಜಿಲ್ಲಾ ಅಧ್ಯಕ್ಷರಾದ ಆರ್.ಎಸ್ ಪಾಟೀಲ್ ಕೂಚಬಾಳ ಸಂತಾಪ ವ್ಯಕ್ತಪಡಿಸಿದ್ದಾರೆ
ರಾಕೇಶ ಕುಲಕರ್ಣಿ ಸಂತಾಪಃ ಸಿ.ಎಂ.ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಭಿವೃದ್ಧಿ ಪರ ಚಿಂತಕರಾಗಿದ್ದ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ.ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ ಹಾಗೂ ನಗರ ಮಧ್ಯಮ ಸಂಚಾಲಕ ರಾಕೇಶ ಕುಲಕರ್ಣಿ ಸಂತಾಪ ವ್ಯಕ್ತಪಡಿಸಿದ್ದಾರೆ
ಅರುಣ್ ಶಾಪೂರ್ ಸಂತಾಪಃ ಹಾನಗಲ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಸಿ.ಎಮ್. ಉದಾಸಿ ಅವರು ವಿಧಿವಶರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ನೋವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಿ, ಕುಟುಂಬಸ್ಥರು ಹಾಗೂ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುವೆ.ವಿಧಾನ ಪರಿಷತ್ ಶಾಸಕರಾದ ಅರುಣ್ ಶಾಪೂರ್ ಸಂತಾಪ ವ್ಯಕ್ತಪಡಿಸಿದ್ದಾರೆ