ಸಿ.ಎಂ. ಅಧ್ಯಕ್ಷತೆಯ ಸಭೆಯಲ್ಲಿ ತೆರಿಗೆ ಪ್ರಮಾಣ ಪರಿಶೀಲನೆ

ಬೆಂಗಳೂರು, ನ. ೧೨- ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಅಡಿ ವಿಧಿಸಲಾಗುತ್ತಿರುವ ತೆರಿಗೆ ಪ್ರಮಾಣ ಪರಿಶೀಲನಾ ಸಮಿತಿಯ ಸಭೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ಅಧ್ಯಕ್ಷೆತಯಲ್ಲಿಂದು ನಡೆದಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಿಂದ ವರ್ಚ್ಯುಯಲ್ ಮೂಲಕ ಈ ಸಭೆ ನಡೆದಿದ್ದು, ದೇಶದ ಎಲ್ಲ ರಾಜ್ಯಗಳ ಹಣಕಾಸು ಸಚಿವರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಕೇಂದ್ರದ ಹಣಕಾಸು ಇಲಾಖೆ ಜಿಎಸ್‌ಟಿ ಅಡಿ ವಿಧಿಸಲಾಗುತ್ತಿರುವ ತೆರಿಗೆ ಪ್ರಮಾಣ, ಜಿಎಸ್‌ಟಿಯಿಂದ ವಿನಾಯ್ತಿ ಪಡೆದಿರುವ ಉತ್ಪನ್ನಗಳ ಬಗ್ಗೆ ಪರಿಶೀಲಿಸಲು ಹಾಗೂ ತೆರಿಗೆ ವಂಚನೆ ಮೂಲಗಳನ್ನು ಗುರುತಿಸಲು ರಾಜ್ಯದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲ ಸಮಿತಿ ರಚಿಸಿದ್ದು, ಈ ಸಮಿತಿಗೆ ವಿವಿಧ ರಾಜ್ಯಗಳ ಹಣಕಾಸು ಸಚಿವರುಗಳು ಸದಸ್ಯರುಗಳಾಗಿದ್ದಾರೆ.
ಈ ಸಮಿತಿಯ ಸಭೆ ಇಂದು ನಡೆದಿದ್ದು, ಈ ಸಮಿತಿ ೨ ತಿಂಗಳಲ್ಲಿ ಕೇಂದ್ರದ ಹಣಕಾಸು ಇಲಾಖೆಗೆ ವರದಿ ಸಲ್ಲಿಸಬೇಕಿದೆ.
ಈ ಸಮಿತಿಯ ಅಧ್ಯಕ್ಷರಾಗಿರುವ ಮುಖ್ಯಮತ್ರಿ ಬಸವರಾಜಬೊಮಾಮಾಯಿ ಅವರು ವರ್ಚ್ಯುಯಲ್ ಮೂಲಕ ಎಲ್ಲ ರಾಜ್ಯಗಳ ಹಣಕಾಸು ಸಚಿವರುಗಳ ಜತೆ ಚರ್ಚೆ ನಡೆಸಿದ್ದು, ಜಿಎಸ್‌ಟಿ ತೆರಿಗೆಯ ಸ್ಲ್ಯಾಬಾದ ಶೇ. ೧೨ ಹಾಗೂ ಶೇ. ೧೮ ತೆರಿಗೆ ಪ್ರಮಾಣವನ್ನು ವಿಲೀನಗೊಳಿಸಬೇಕು ಎಂಬ ಬೇಡಿಕೆ ಬಗ್ಗೆಯೂ ಈ ಸಭೆಯಲ್ಲಿ ಸಮಾಲೋಚನೆ ನಡೆಸಿದ್ದಾರೆ.
ಜಿಎಸ್‌ಟಿಯಿಂದ ವಿನಾಯ್ತಿ ಪಡೆದಿರುವ ಕೆಲ ಉತ್ಪನ್ನಗಳನ್ನು ಜಿಎಸ್‌ಟಿ ಅಡಿ ತಂದು ತೆರಿಗೆ ವಿಧಿಸುವ ಸಂಬಂಧವೂ ಈ ಸಭೆಯಲ್ಲಿ ಸಮಾಲೋಚನೆಗಳು ನಡೆಯಲಿವೆ.
ಜಿಎಸ್‌ಟಿ ತೆರಿಗೆಯ ವಂಚನೆಯ ಮೂಲಗಳನ್ನು ಪತ್ತೆ ಮಾಡಿ ಜಿಎಸ್‌ಟಿ ವಂಚನೆಯನ್ನು ತಪ್ಪಿಸುವ ಸಂಬಂಧವೂ ಎಲ್ಲ ರಾಜ್ಯಗಳ ಹಣಕಾಸು ಸಚಿವರೊಂದಿಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸುವರು.