“ ಸಿ.ಇ.ಟಿ. ಯಲ್ಲಿ ಎಸ್ ಆರ್ ಎಸ್ ವಿದ್ಯಾರ್ಥಿಗಳ ಸಾಧನೆ ”

 ಚಿತ್ರದುರ್ಗ.ಸೆ.೨೩;  ನಗರದ ಎಸ್ ಆರ್ ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೆ ಆಗಸ್ಟ್ 28,29ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ರ‍್ಯಾಂಕ್‌ಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಕಾಲೇಜಿನ ವಿದ್ಯಾರ್ಥಿ ಕು. ಉದಯ್ ಕಿರಣ್ ರೆಡ್ಡಿ ಎನ್, ಇಂಜಿನಿಯರಿAಗ್ ವಿಭಾಗದಲ್ಲಿ ರಾಜ್ಯಕ್ಕೆ 815ನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಜೆಇಇ ಮೈನ್ಸ್ನಲ್ಲೂ 96.69 ಪರ್ಸಂಟೈಲ್ ಪಡೆದುಕೊಂಡಿದ್ದಾರೆ. ಕು. ಶ್ರೇಯಸ್ ಆರ್, ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 412ನೇ ರ‍್ಯಾಂಕ್, ಪ್ರಾಕೃತಿಕ ಯೋಗ ವಿಜ್ಞಾನದಲ್ಲಿ 414ನೇ ರ‍್ಯಾಂಕ್, ಬಿ.ಎಸ್‌ಇ ಅಗ್ರಿಯಲ್ಲಿ 815ನೇ ರ‍್ಯಾಂಕ್, ಬಿ. ಫಾರ್ಮ 649, ಡಿ.ಫಾರ್ಮ 449ನೇ ರ‍್ಯಾಂಕ್ ಗಳಿಸಿರುವ ಈ ವಿದ್ಯಾರ್ಥಿ ನೀಟ್ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕಾಲೇಜಿನ ಇತರೆ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಉತ್ತಮ ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ. ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿಗಳಾದ ಡಾ. ರವಿ ಟಿ ಎಸ್, ಪ್ರಾಂಶುಪಾಲರಾದ  ಗಂಗಾಧರ್ ಈ, ಹಾಗೂ ಎಲ್ಲಾ ಉಪನ್ಯಾಸಕರು ಅಭಿನಂದಿಸಿದ್ದಾರೆ.