ಸಿ.ಇ.ಟಿ.ಯಲ್ಲಿ ಎಕ್ಸಲಂಟ್ ವಿದ್ಯಾರ್ಥಿಗಳ ಸಾಧನೆಪ್ರತಿಕ್ಷಾ ವಾಲಿ ರಾಜ್ಯಕ್ಕೆ 161ನೇ ರ್ಯಾಂಕ್

ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.3: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಚೆಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಯಲ್ಲಿ ವಿಜಯಪುರದ ಪ್ರತಿಷ್ಠಿತ ಎಕ್ಸಲಂಟ್ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪ್ರತಿಕ್ಷಾ ವಾಲಿ ಬಿ.ಎನ್.ವಾಯ್.ಎಸ್ ನಲ್ಲಿ 161 ನೇ ರ್ಯಾಂಕ್, ವೆಟರ್ನರಿಯಲ್ಲಿ 289ನೇ ರ್ಯಾಂಕ್, ಬಿ.ಎಸ್ಸಿ. ಅಗ್ರಿ 368ನೇ ರ್ಯಾಂಕ್ ಹಾಗೂ ಇಂಜಿನಿಯರಿಂಗ್‍ನಲ್ಲಿ 1738ನೇ ರ್ಯಾಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾಳೆ.
ಪ್ರಜ್ವಲ್ ಸುರಗಿಹಳ್ಳಿ (ಇಂಜಿನಿಯರಿಂಗ್-1045, ಬಿ.ಎಸ್ಸಿ. ಅಗ್ರಿ-187, ವೆಟರ್ನರಿ-434), ಪ್ರಭುಗೌಡ ಪಾಟೀಲ (ಇಂಜಿನಿಯರಿಂಗ್-1913), ಬಿರೇಶ ಹನಕನಹಳ್ಳಿ (ಇಂಜಿನಿಯರಿಂಗ್-1930, ಬಿ.ಎಸ್ಸಿ. ಅಗ್ರಿ-603, ವೆಟರ್ನರಿ-185), ಕಿರಣಕುಮಾರ ಬೇಳಗಲಿ (ಇಂಜಿನಿಯರಿಂಗ್-2093, ಬಿ.ಎಸ್ಸಿ. ಅಗ್ರಿ-432, ವೆಟರ್ನರಿ-461), ಬಸವರಾಜ ತುಕ್ಕನ್ನವರ (ಇಂಜಿನಿಯರಿಂಗ್-2349, ಬಿ.ಎಸ್ಸಿ. ಅಗ್ರಿ-459, ವೆಟರ್ನರಿ-114), ದಾನಮ್ಮ ಮದರಿ (ಇಂಜಿನಿಯರಿಂಗ್-2432), ಅಮೋಘ ಹೊನ್ನುಂಗರ (ಇಂಜಿನಿಯರಿಂಗ್-2825, ಬಿ.ಎಸ್ಸಿ. ಅಗ್ರಿ-762, ವೆಟರ್ನರಿ-1146), ಅಭಿಷೇಕ ಭಂಡಾರಕವಠೆ (ಇಂಜಿನಿಯರಿಂಗ್-3088, ಬಿ.ಎಸ್ಸಿ. ಅಗ್ರಿ-890, ವೆಟರ್ನರಿ-484), ಸೌಂದರ್ಯ ಪಾಟೀಲ (ಇಂಜಿನಿಯರಿಂಗ್-4686), ಸಂದೇಶ ಪಾತ್ರೋಟ (ಇಂಜಿನಿಯರಿಂಗ್-4706) ರ್ಯಾಂಕ್ ಗಳಿಸಿ ಅತ್ಯುನ್ನತ ಸಾಧನೆ ಮಾಡಿದ್ದಾರೆ
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಪ್ರಾಂಶುಪಾಲರಾದ ಶ್ರೀಕಾಂತ ಕೆ.ಎಸ್. ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.