ಸಿ.ಇ.ಟಿ ಪರೀಕ್ಷೆಯಲ್ಲಿ ಶ್ರೀಗುರು ಕಾಲೇಜಿಗೆ ಉತ್ತಮ ಫಲಿತಾಂಶಇಂಜಿನಿಯರಿಂಗ್ ವಿಭಾಗದಲ್ಲಿ 226, ಬಿ.ಎಸ್ಸಿ. ಅಗ್ರಿಕಲ್ಚರ್-164ನೇ ರ್ಯಾಂಕ್

ಕಲಬುರಗಿ,ಜೂ.17-2022-23ನೇ ಶೈಕ್ಷಣಿಕ ಸಾಲಿನ ಕರ್ನಾಟಕ ಸಿ.ಇ.ಟಿ.-2023ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಗರದ ಶ್ರೀಗುರು ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಬಿ.ಎನ್.ವೈ.ಎಸ್. ಅಗ್ರಿಕಲ್ಚರ್, ವೆಟರನರಿ, ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆಯುವುದರ ಮೂಲಕ ಉತ್ತಮ ರ್ಯಾಂಕ್ ಪಡೆದು ಅಮೋಘ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಸೊಹೈಲ್ ಫೈಹಿಮೂದ್ದೀನ ಅವರು ಕೆ.ಸಿ.ಇ,ಟಿ ಬಿ.ಎಸ್ಸಿ ಇಂಜಿನಿಯರಿಂಗ್ – 226, ಅಗ್ರಿಕಲ್ಚರ್-164, ವೆಟರನರಿ-535, ಬಿ.ಎನ್.ವೈ.ಎಸ್.-1114ರ್ಯಾಂಕ್ ಪಡೆದು ಕಾಲೇಜಿನ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ, ಸಂಸ್ಥೆಯ ಅಧ್ಯಕ್ಷರಾದ ನಳಿನಿ ಎ.ನಾಯ್ಕ್, ಕಾರ್ಯದರ್ಶಿ ನಿತೀನ ನಾಯ್ಕ್, ಆಡಳಿತಾಧಿಕಾರಿ ನೇಹಾ ಎನ್.ನಾಯ್ಕ್ ಸದಸ್ಯರಾದ ಗುರುರಾಜ ನಾಯ್ಕ್, ಕಾಲೇಜಿನ ಪ್ರಾಚಾರ್ಯರಾದ ವಿದ್ಯಾಸಾಗರ ಗೋಗಿ, ಕಾಲೇಜಿನ ಬೋಧಕ ಬೋಧಕೇತರ ವರ್ಗ, ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದೆ.

ಎ.ವೈ.ನಾಯ್ಕ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವ ಶ್ರೀಗುರು ಸ್ವತಂತ್ರ ಪದವಿಪೂರ್ವ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಪ್ರತಿವರ್ಷ ಸಾಧನೆ ಮಾಡುತ್ತಲೇ ಬಂದಿದೆ. ಪ್ರಸಕ್ತ ಸಾಲಿನ ನೀಟ್ ಮತ್ತು ಸಿಇಟಿ ಪರೀಕ್ಷೆಯಲ್ಲೂ ಸಾಧನೆ ಮುಂದುವರಿಸಿದೆ. ಹೆಚ್ಚಿನ ವಿದ್ಯಾರ್ಥಿಗಳು ಸಿಇಟಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಉತ್ತಮ ಬೋಧನೆ ನೀಡಿದ ಉಪನ್ಯಾಸಕರಿಗೂ ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸುವೆ.
ನಿತೀನ ನಾಯ್ಕ್, ಶ್ರೀಗುರು ಕಾಲೇಜಿನ ಕಾರ್ಯದರ್ಶಿ