ಸಿಹಿ ಹಂಚಿ ಮೊಹಮ್ಮದ್ ಪೈಗಂಬರ್ ಜನ್ಮದಿನಾಚರಣೆ

ರಾಯಚೂರು,ಅ.೩೦- ಮೊಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯ ಅಂಗವಾಗಿ ನಗರದ ಸ್ಟೇಷನ್ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿಯನ್ನು ವಿತರಣೆ ಮಾಡಿ ಹಬ್ಬವನ್ನು ಆಚರಿಸಲಾಯಿತು.
ಫಾತೆಹ ಕಾರ್ಯಕ್ರಮವನ್ನು ಅಹಮದ್ ಬಿಲಾಲ್ ಹಫೀಜ್ ನೆರವೇರಿಸಿದರು. ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯ ಹೈದ್ರಾಬಾದ್ ಕರ್ನಾಟಕದ ಅಧ್ಯಕ್ಷ ಮತ್ತು ರಾಯಚೂರು ಜಿಲ್ಲಾಧ್ಯಕ್ಷ ಸಾಧಿಕ್ ಆಹ್ಮದ್ ಖಾನ್, ಹೊಸ ರಾಮು, ಹೊಸೂರು ನಾಸೀರ್, ಶೇಕ್ ನಾಸೀರ್, ಜಾಫರ್, ನಿಸಾರ್, ಅರುಣ್, ಸಂತೋಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು