
ಗುರುಮಠಕಲ್:ಮಾ.2:ದಿನಾಂಕ 1-3-2023 ರಂದು ಕರ್ನಾಟಕ ರಾಜ್ಯ ಸರ್ಕಾರ ನೌಕರ ಸಂಘವು ಕರೆನೀಡಿದ್ದ ಮುಷ್ಕರ ದ ನಂತರ ಸರ್ಕಾರವು ನೌಕರರಿಗೆ ನೀಡಿದ ಶೇಕಡಾ 17 ರಷ್ಟು ಮಧ್ಯಂತರ ಪರಿಹಾರದ ನೀಡಿದ ಪ್ರಯುಕ್ತ. ಗುರುಮಠಕಲ್ ಪಟ್ಟಣದ ಅತಿಥಿ ಗೃಹದಲ್ಲಿ ತಾಲೂಕ ಅಧ್ಯಕ್ಷ ಸಂತೋಷ್ ಕುಮಾರ್ ನಿರೇಟಿ ಅವರ ನೇತೃತ್ವದಲ್ಲಿ ತಾಲೂಕಿನ ವಿವಿಧ ವೃಂದಸಂಘಗಳ ಅಧ್ಯಕ್ಷರು ಹಾಗೂ ಸರಕಾರಿ ನೌಕರರು ಸೇರಿ ಸಿಹಿ ಹಂಚಿ ಸಂಭ್ರಮಿಸಿದರು.
ಸರ್ಕಾರಿ ನೌಕರ ಒಂದೇ ದಿನದ ಧರಣಿಗೆ ಸರಕಾರವು ಉತ್ತಮ ಪ್ರತಿಕ್ರಿಯೆ ನೀಡಿದ ಕಾರಣ ಸರಕಾರಕ್ಕೆ ಹಾಗೂ ಸಂಘದ ಅಧ್ಯಕ್ಷರಾದ. ಶ್ರೀ ಸಿ ಎಸ್ ಷಡಕ್ಷರಿ ಅವರಿಗೆ ಧನ್ಯವಾದಗಳು ಸಲ್ಲಿಸಿದರು. ಸಂಭ್ರಮಾಚರಣೆಯಲ್ಲಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ ರೆಡ್ಡಿ ಪೆÇಲೀಸ್ ಪಾಟೀಲ್, ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಶಿವಾರೆಡ್ಡಿ, ಜಿಲ್ಲಾಧ್ಯಕ್ಷರಾದ ಲಕ್ಷ್ಮಿಕಾಂತ್ರೆಡ್ಡಿ ಚಂಡ್ರಿಕಿ, ಕೃಷ್ಣ ರೆಡ್ಡಿ. ಬಾಲರಾಜ ಚಂಡ್ರಿಕಿ. .ಎಂಎಸ್ ಭೂತಾಳ, ಸಿದ್ದಲಿಂಗಪ್ಪ ,ನಾಗೇಶ್, ದೇವೇಂದ್ರಪ್ಪ ಮುಂತಾದ ನೌಕರರು ಪಾಲ್ಗೊಂಡಿದ್ದರು. ಇದೇ ಸಮಯದಲ್ಲಿ ತಾಲೂಕ ಅಧ್ಯಕ್ಷರು ಧರಣಿಗೆ ಸಹಕರಿಸಿದ ಎಲ್ಲಾ ಇಲಾಖೆಗಳಿಗೆ ಹಾಗೂ ಸಂಘದ ಅಧ್ಯಕ್ಷರಿಗೆ ಧನ್ಯವಾದಗಳನ್ನು ಸಲ್ಲಿಸಿದರು.