
ಚಾಮರಾಜನಗರ, ಮಾ.04:-ಇರುವೆಗೆ ಸಿಂಪಡಿಸುವ ಇರುವೆ ನಾಶಕ ತಿಂದು 5 ವರ್ಷದ ಬಾಲಕ ಅಸುನೀಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪುಟ್ಟಿರಮ್ಮನದೊಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕ್ಯಾತೆ ಗೌಡ ಎಂಬುವರ 5 ವರ್ಷದ ಮಗ ಶಿವು ಎಂಬಾತ ಮೃತಪಟ್ಟ ಬಾಲಕ.
ಕ್ಯಾತೆಗೌಡ ತಮ್ಮ ಮನೆಯ ಹಿತ್ತಲಿನ ಕಿಟಕಿಯಲ್ಲಿ ಇರುವೆ ಗೆ ಸಿಂಪಡಿಸುವ ಔಷಧಿಯನ್ನು ತಂದಿಟ್ಟಿದ್ದರು. ಮಗು ಆ ಆಟವಾಡುವ ಸಮಯದಲ್ಲಿ ಸಿಹಿ ತಿಂಡಿ ಇರಬೇಕೆಂದು ತಿಳಿದು ಇರುವೆ ಪುಡಿಯನ್ನು ತಿಂದು ನರಳಾಡುತ್ತಿತ್ತು, ಇದನ್ನು ಗಮನಿಸಿದ ಪೆÇೀಷಕರು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಮಗು ಚಿಕಿತ್ಸೆಗೆ ಫಲಿಸದೆ ಗುರುವಾರ ರಾತ್ರಿ ಸಾವನ್ನಪ್ಪಿದೆ.
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.