ಹೊನ್ನಾಳಿ.ಜೂ.೧; ತಾಲೂಕಿನಾಧ್ಯಂತ 2023-24 ನೇ ಸಾಲಿನ ಶೈಕ್ಷಣಿಕ ವರ್ಷಾರಂಭ ಆರಂಭವಾಯಿತು, ಶಾಲೆಯ ಪ್ರಾರೋಂಭೋತ್ಸವಕ್ಕೆ ತಾಲೂಕಿನ ಎಲ್ಲಾ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು ಹಾಗೂ ಶಾಲೆಗೆ ಆಗಮಿಸಿದ ಮಕ್ಕಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಿದ ಶಿಕ್ಷಕರು ನಂತರ ಶಾಲೆಯಲ್ಲೇ ಗೋದಿ ಉಗ್ಗಿ ಪಾಯಸ ನೀಡುವುದರ ಮುಖಾಂತರ ಸಿಹಿಯನ್ನು ನೀಡಿದರು. ಪ್ರತಿ ಶಾಲೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದುದ್ದು ಬಹಳ ವಿಶೇಷವೆನ್ನಿಸಿತ್ತು.ಈ ಶೈಕ್ಷಣಿಕ ವರ್ಷದಲ್ಲಿ ಕಿರಿಯ,ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಮೊದಲನೇ ದಿನ ಶೇ 40 ರಷ್ಟು ಮಾತ್ರ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು.ಪಟ್ಟಣದ ಪೇಟೆ ಶಾಲೆಯಲ್ಲಿ ಶಾಲೆ ಎಸ್‌ಡಿಎಂಸಿ ಹಾಗೂ ಶಿಕ್ಷಕರು ಒಟ್ಟಾಗಿ ಸೇರಿ ದಾಖಲಾತಿ ಆಂದೋಲನದಲ್ಲಿ ಭಾಗವಹಿಸಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಿ ಇದರಿಂದ ಸರ್ಕಾರದ ಸೌಲಭ್ಯಗಳು ಮಕ್ಕಳಿಗೆ ಲಭ್ಯವಾಗಲಿದ ಎಂದು ಕಾರ್ನರ್ ಮೀಟಿಂಗ್ ಮಾಡಿರುವುದು ಬೇರೆ ಶಾಲೆಗಳಿಗೆ ಪ್ರೇರಣೆಯಾಗಿದೆ.ಕ್ಷೇತ್ರ ಶಿಕ್ಷಾಣಿಧಿಕಾರಿ ನಂಜರಾಜ್ ಹಾಗೂ ತಾಲುಕು ಅಕ್ಷರ ದಾಸೋಹ ನಿರ್ದೇಶಕ ಕೆ.ಆರ್.ರುದ್ರಪ್ಪ ಹಾಗೂ ಇನ್ನೀತರ ಶಿಕ್ಷಣಾಧಿಕಾರಿಗಳು ಹಲವು ಶಾಲೆಗಳಿಗೆ ಭೇಟಿ ಶಾಲೆಯ ಸ್ವಚ್ಚತೆ ಹಾಗೂ ಕೊಠಡಿಗಳನ್ನು ಪರಿಶೀಲಿಸಿದ್ದಾರೆ. ತಾಲೂಕಿನಾಧ್ಯಂತ ಪ್ರತಿ ಶಾಲೆಯಲ್ಲೂ ಪ್ರಾರಂಭೋತ್ಸವದ ದಿನವೇ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತç ಹಾಗೂ ಪುಸ್ತಕಗಳನ್ನು ನೀಡಿದ್ದಾರೆಬಿಇಒ ನಂಜರಾಜ್ ಮಾತನಾಡಿ, ಈಗಾಗಲೆ ಅವಳಿ ತಾಲೂಕಿನಾಧ್ಯಂತ ನಮ್ಮ ಶಿಕ್ಷಕರು ಶಾಲಾ ಪ್ರಾರಂಭೊತ್ಸವಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.ಪ್ರತಿ ವಿದ್ಯಾರ್ಥಿಯೂ ಶಾಲೆಯಿಂದ ಹೊರಗುಳಿಯದಂತೆ ಸರ್ಕಾರಿ ಶಾಲೆಗೆ ದಾಖಲಾಗುವು ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ, ಅದರಂತೆ ಪ್ರತಿ ಗ್ರಾಮದಲ್ಲೂ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಪ್ರಾರಂಭವಾಗಿದೆ ಎಂದು ಹೇಳಿದರು.