ಸಿಹಿಯಾದ ರುಚಿಯಾದ ಬಾಸುಂದಿ

ಬೇಕಾಗುವ ಸಾಮಗ್ರಿಗಳು:
ಹಾಲು: ಎರಡು ಲೀಟರ್
ಪಿಸ್ತಾ: ಹತ್ತು
ಬಾದಾಮಿ: ಹತ್ತು
ಗೋಡಂಬಿ : ಹತ್ತು
ಕೇಸರಿ : ಅರ್ಧ ಚಮಚ
ಸಕ್ಕರೆ : ಅರ್ಧ ಕಪ್
ಏಲಕ್ಕಿ ಪುಡಿ : ಕಾಲು ಚಮಚ
ಮಾಡುವ ವಿಧಾನ:
ಒಂದು ಪ್ಯಾನ್ ತೆಗೆದುಕೊಂಡು ಮಧ್ಯಮ ಉರಿಯಲ್ಲಿ ಸ್ಟೌ ಮೇಲಿಟ್ಟು ಎರಡು ಲೀಟರ್ ಹಾಲನ್ನು ಹಾಕಿ ಕುದಿಸಿ. ಹಾಲು ಚೆನ್ನಾಗಿ ಕುದಿಯುತ್ತಿರುವಾಗ ಅದಕ್ಕೆ ಚಿಕ್ಕಚಿಕ್ಕ ಚೂರುಗಳನ್ನಾಗಿ ಮಾಡಿದ ಬಾದಾಮಿ, ಪಿಸ್ತಾ ಮತ್ತು ಗೋಡಂಬಿಯನ್ನು ಹಾಕಿ ಹಾಲನ್ನು ಚೆನ್ನಾಗಿ ಕಲಸುತ್ತಿರಿ. ಹಾಲು ಕೆನೆ ಕಟ್ಟಿದಂತೆ ಅದನ್ನು ಒಂದು ಕಡೆ ಮಾಡಿ ಮತ್ತೆ ಮುಂದುವರಿಸಿ. ಹೀಗೆ ಮಾಡುತ್ತಾ ಹಾಲು ಕ್ರೀಮ್‌ನ ಹದಕ್ಕೆ ಬರುತ್ತದೆ. ನಂತರ ಹಾಲಿನ ಕೆನೆಯನ್ನೆಲ್ಲಾ ಅದರಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಅರ್ಧ ಕಪ್ ಸಕ್ಕರೆ ಮತ್ತು ಕೇಸರಿಯನ್ನು ಹಾಕಿ. ಸಕ್ಕರೆಯು ಕರಗಿದ ನಂತರ ಹತ್ತು ನಿಮಿಷ ಹಾಗೆಯೇ ಮಿಕ್ಸ್ ಮಾಡುತ್ತಿರಿ. ಹಾಲು ಗಟ್ಟಿಯಾಗುತ್ತಾ ಬಂದಂತೆ ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿದರೆ ಬಿಸಿಬಿಸಿಯಾದ ಬಾಸುಂದಿ ರೆಡಿಯಾಗುತ್ತದೆ.