
ಬೇಕಾಗುವ ಪದಾರ್ಥಗಳು:
- ಸಿಹಿಕುಂಬಳಕಾಯಿ ಹೋಳು – ೧ ಲೋಟ
- ಕಾಯಿತುರಿ – ಅರ್ಧ ಲೋಟ
- ಶುಂಠಿ – ೧ ಇಂಚು
- ಹಸಿಮೆಣಸಿನಕಾಯಿ – ೨ – ೪
- ಈರುಳ್ಳಿ – ೧
- ಕೊತ್ತಂಬರಿಸೊಪ್ಪು – ಸ್ವಲ್ಪ
- ಪುದೀನಾ ಎಲೆ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಕರಿಯಲು
- ಚಿರೋಟಿರವೆ, ಅಕ್ಕಿಹಿಟ್ಟು – ಕಲೆಸಲು ಹಿಡಿಸುವಷ್ಟು
- ಗರಂಮಸಾಲ – ಅರ್ಧ ಚಮಚ
(ಇವುಗಳನ್ನೆಲ್ಲಾ ಸೇರಿಸಿ ಕಲೆಸಿ, ೧೫ ನಿಮಿಷ ಬಿಡಬೇಕು.)
ವಿಧಾನ:
ತರಕಾರಿ ಬೇಯಿಸಿದ ನೀರಿನಲ್ಲೇ ಕಾಯಿತುರಿ ರುಬ್ಬಬೇಕು. ಬೇಯಿಸಿದ ಸಿಹಿಕುಂಬಳಕಾಯಿಗೆ ರುಬ್ಬಿದ ಮಿಶ್ರಣ ಹಾಕಬೇಕು. ಈ ಮಿಶ್ರಣಕ್ಕೆ ತುರಿದ ಶುಂಠಿ, ಹೆಚ್ಚಿದ ಹಸಿಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹಿಡಿಸುವಷ್ಟು ಚಿರೋಟಿರವೆ ಹಾಕಿ ಕಲೆಸಿ, ಉಂಡೆಮಾಡಿ ವಡೆ ಆಕಾರದಲ್ಲಿ ತಟ್ಟಿ ಕಾದಎಣ್ಣೆಗೆ ಹಾಕಿ ಕರಿಯಬೇಕು.