ಸಿಸ್ಟೋಬಾಲ್ ಕ್ರೀಡಾ ಪ್ರತಿಭೆಗೆ ಧನ ಸಹಾಯ ನೀಡಿದ ಸಿದ್ದಣ್ಣ ಸಕ್ರಿ

ವಿಜಯಪುರ, ನ.19-ವಿಜಯಪುರದ ಸಿಸ್ಟೋಬಾಲ್ ಕ್ರೀಡಾಪಟು ಕು:ಅಕ್ಷತಾ ತಾರಾಪುರ ಇವರು ಥೈಲ್ಯಾಂಡಿನಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸುವಲ್ಲಿ ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ತಿಳಿದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯಕ್ತರಾದ ಸಿದ್ದಣ್ಣ ಸಕ್ರಿ ಅವರು ಇಂದು ತಮ್ಮ ಬ್ಯಾಂಕಿಗೆ ಕರೆಸಿಕೊಂಡು ಹನ್ನೊಂದು ಸಾವಿರ ರೂ ಸಹಾಯಧನ ನೀಡಿದರು.
ಅದರಂತೆ ಸ್ಕೌಟ್ ಗೈಡ್ ಕುಟುಂಬ ಸದಸ್ಯರಾದ ಪಿ ಎಸ್ ಕುಂಬಾರ, ಎಸ್ ಎಸ್ ಹುಬ್ಬಳಿ,್ಳ ಗುಂಡು ಚವ್ವಾಣ, ಎಚ್ ಪಿ ದೆಶಪಾಂಡೆ, ಸವಿತಾ ತೊರವಿ ಇವರೂ ಧನ ಸಹಾಯ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.