ಸಿಸೋಡಿಯಾರಿಂದ ದಾಖಲೆ ನಾಶ

ಅಬಕಾರಿ ಹಗರಣ
ನವದೆಹಲಿ,ಮೇ.೧೬- ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಕರಡು ಕ್ಯಾಬಿನೆಟ್ ಟಿಪ್ಪಣಿಯನ್ನು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಾಶಪಡಿಸಿದ್ದಾರೆ ಎಂದು ಸಿಬಿಐ ತನ್ನ ಪೂರಕ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಅಬಕಾರಿ ಇಲಾಖೆ ಸಿದ್ಧಪಡಿಸಿದ ಕರಡು ಕ್ಯಾಬಿನೆಟ್ ಟಿಪ್ಪಣಿಯನ್ನು ಮನೀಶ್ ಸಿಸೋಡಿಯಾ “ನಾಶಗೊಳಿಸಿದ್ದಾರೆ” ಮತ್ತು ೨೦೨೧ರ ಜನವರಿ ೨೮ ರಂದು ನಡೆದ ಸಭೆಯಲ್ಲಿ ಸಚಿವರ ಮಂಡಳಿ ಸಭೆಯಲ್ಲಿ ಮುಂದೆ ಇಡಲಾದ ಪಟ್ಟಿ ನಾಶ ಮಾಡಲಾಗಿದೆ ಎಂದು ತಿಳಿಸಿದೆ.’ನಾಶವಾದ’ ಕರಡು ಕ್ಯಾಬಿನೆಟ್ ಟಿಪ್ಪಣಿಯಲ್ಲಿ, ರಂಜನ್ ಗೊಗೊಯ್ ಮತ್ತು ಕೆ.ಜಿ.ಬಾಲಕೃಷ್ಣನ್, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಮುಕುಲ್ ರೋಹ್ಟಗಿ, ಹಿರಿಯ ವಕೀಲ ಮತ್ತು ಮಾಜಿ ಅಟಾರ್ನಿ ಜನರಲ್ ಮತ್ತು ಇತರರ ಕಾನೂನು ಅಭಿಪ್ರಾಯಗಳನ್ನು ಪಡೆಯಲಾಗಿದೆ ಎಂದು ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.
ಕ್ಯಾಬಿನೆಟ್ ಟಿಪ್ಪಣಿ ಒಳಗೊಂಡಿರುವ ಫೈಲ್ ಅನ್ನು ಕ್ಯಾಂಪ್ ಕಚೇರಿಯಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸ ಕೊಂಡೊಯ್ಯಲಾಗಿದೆ. ದೆಹಲಿಯ ಅಬಕಾರಿ ಇಲಾಖೆ ಅಧಿಕಾರಿಗಳು ಕೇಜ್ರಿವಾಲ್ ಅವರ ಹೆಚ್ಚುವರಿ ಕಾರ್ಯದರ್ಶಿ ಪ್ರವೇಶ್ ಝಾ ಅವರಿಗೆ ಕಡತವನ್ನು ಹಸ್ತಾಂತರಿಸಿದ್ದಾರೆ ಎಂದು ತಿಳಿಸಲಾಗಿದೆ,ಹಣಕಾಸು ಕಾರ್ಯದರ್ಶಿ ಕೆಲಸ ನೋಡಿಕೊಳ್ಳುತ್ತಿದ್ದ ಕೆ.ಪಿ.ಗುಪ್ತ ಅವರು ಕಡತಕ್ಕೆ ಸಹಿ ಹಾಕಿ ಸಿಸೋಡಿಯಾ ಅವರಿಗೆ ಗುರುತು ಮಾಡಿ ಝಾ ಅವರಿಗೆ ವಾಪಸ್ ನೀಡಿದ್ದಾರೆ. ನಂತರ, ಸಚಿವ ಸಂಪುಟದ ಸಭೆಯ ಮುಂದೆ ಇಡುವ ಮೊದಲು ಮುಖ್ಯಮಂತ್ರಿ ಅನುಮೋದನೆಯನ್ನು ಪಡೆಯಲು ಝಾ ಅವರು ಕಡತವನ್ನು ಸಿಸೋಡಿಯಾ ಅವರಿಗೆ ನೀಡಿದರು. ಆದರೆ, ಈ ಕಡತವನ್ನು ಸಚಿವರು ಸಭೆಯಲ್ಲಿ ಪರಿಗಣಿಸಲಿಲ್ಲ ಎಂದು ಹೇಳಲಾಗಿದೆ.
ಮನೀಶ್ ಸಿಸೋಡಿಯಾ ಅವರು ದೆಹಲಿ ಅಬಕಾರಿ ಆಯುಕ್ತ ರಾಹುಲ್ ಸಿಂಗ್ ಅವರಿಗೆ ಕರೆ ಮಾಡಿ ಕಾನೂನು ತಜ್ಞರ ಅಭಿಪ್ರಾಯಗಳನ್ನು ಕ್ಯಾಬಿನೆಟ್ ನೋಟ್‌ನಲ್ಲಿ ಸೇರಿಸಿದ್ದಕ್ಕಾಗಿ ಕೋಪ ಹೊರ ಹಾಕಿದ್ದಾರೆ ಎನ್ನುವ ಸಂಗತಿ ತಿಳಿಸಿದೆ.ಅಬಕಾರಿ ಇಲಾಖೆಯು ಸಿಸೋಡಿಯಾ ಅವರಿಗೆ ಕಡತವನ್ನು ಸಲ್ಲಿಸಿದೆ ಎಂದು ಅವರ ಡಿಜಿಟಲ್ ಸಾಕ್ಷ್ಯಗಳು ದೃಢಪಡಿಸಿವೆ ಎಂದು ಸಿಬಿಐ ಆರೋಪಿಸಿದೆ.