
ಸಿರುಗುಪ್ಪ : ತಾಲ್ಲೂಕಿನ ಕುಡುದರಹಾಳ್ ಗ್ರಾಮದ 1ನೇ ವಾರ್ಡ್ ಎಸ್.ಸಿ ಕಾಲೋನಿಯಲ್ಲಿ 8 ವರ್ಷಗಳಿಂದ ಸಿಸಿ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಗೆ ಮನವಿ ಪತ್ರ ಸಲ್ಲಿಸಿದರು, ಇಲ್ಲಿಯವರೆಗೂ ಸಿಸಿ ರಸ್ತೆ ನಿರ್ಮಾಣ ಮಾಡುತ್ತಿಲ್ಲ, ಇಲ್ಲಿನ ಅಧಿಕಾರಿಗಳ ನಿಲರ್ಕ್ಷ್ಯವಾಗಿದೆ, ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮಳೆಗಾಲದಲ್ಲಿ ರಸ್ತೆಯ ಮೇಲೆ ಬಿದ್ದು ತೊಂದರೆ ಅನುಭವಿಸಿದ್ದಾರೆ, ಸಿಸಿ ರಸ್ತೆ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದರು.
ರಸ್ತೆ ನಿರ್ಮಾಣ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಅಂಜಿನಿ, ಆಲಂಸಾ , ವೀರೇಶ್, ಸಣ್ಣ ಆಲಂಸಾ, ನಾಗೇಂದ್, ಹುಲಿಗೆಮ್ಮ. ಅಣ್ಣಮ್ಮ, ಭಾಷಪ್ಪ ಎಚ್ಚರಿಸಿದರು.
One attachment • Scanned by Gmail