ಸಿಸಿ ರಸ್ತೆ ಕಾಮಗಾರಿಗೆ ಸಂಸದರಿಂದ ಚಾಲನೆ

ಕೋಲಾರ.ಏ೧೮: ತಾಲೂಕಿನ ಪೆಮ್ಮಶೆಟ್ಟಿಹಳ್ಳಿ ಗ್ರಾಮದಲ್ಲಿ ಸಂಸದರ ಅನುದಾನದಡಿಯಲ್ಲಿ ಸಿಸಿ ರಸ್ತೆಗಳ ಕಾಮಗಾರಿಗೆ ಸಂಸದ ಎಸ್.ಮುನಿಸ್ವಾಮಿ ಗುದ್ದಲಿ ಪೂಜೆ ನಡೆಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮಗಳು ಅಭಿವೃದ್ದಿಯಾದರೆ ದೇಶ ಅಭಿವೃದ್ದಿಯಾದಂತೆ, ಹೀಗಾಗಿ ಪ್ರತಿ ಗ್ರಾಮದಲ್ಲಿ ರಸ್ತೆ, ನೀರು, ಶೌಚಾಲಯಗಳ ನಿರ್ಮಾಣ ಆಗಬೇಕೆಂದರು. ಅಲ್ಲದೆ ನೂತನ ಗ್ರಾಮಪಂಚಾಯ್ತಿ ಸದಸ್ಯರು ಗ್ರಾಮಗಳ ಅಭಿವೃದ್ದಿಗೆ ಪಣತೊಡಬೇಕೆಂದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಪಂಚಾಯ್ತಿ ಸದಸ್ಯೆ ಪದ್ಮಮುನೇಗೌಡ, ಸಂಸದರ ಅನುದಾನದಲ್ಲಿ ಗ್ರಾಮದಲ್ಲಿ ಸಿಸಿ ರಸ್ತೆಗಳನ್ನ ಮಾಡುತ್ತಿರುವುದಕ್ಕೆ ಸಂಸದರಿಗೆ ಧನ್ಯವಾದಗಳನ್ನ ಸಲ್ಲಿಸಿದರು. ಅಲ್ಲದೆ ಗ್ರಾಮದಲ್ಲಿ ಯಾವುದೇ ಸಮಸ್ಯೆ ಇದ್ದರು, ಗ್ರಾಮಸ್ಥರ ಸೇವೆ ಮಾಡಲು ಸದಾ ಸಿದ್ದರಿದ್ದು, ಯಾವುದೇ ಕ್ಷಣದಲ್ಲಾದರೂ ಗ್ರಾಮಸ್ಥರ ಕಷ್ಟಸುಖಕ್ಕೆ ಸ್ಪಂದಿಸುವುದಾಗಿ ಹೇಳಿದರು. ಜೊತೆಗೆ ಗ್ರಾಮಸ್ಥರು ತಮ್ಮ ಋಣ ತೀರಿಸಲು ಅವಕಾಶ ನೀಡಿದ್ದಾರೆ ಹೀಗಾಗಿ ಗ್ರಾಮದ ಅಭಿವೃದ್ದಿಗೆ ಪಣತೊಡಗುವುದಾಗಿ ತಿಳಿಸಿದರು.
ಈ ವೇಳೆ ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಓಂ ಶಕ್ತಿ ಚಲಪತಿ, ಸೂಲೂರು ಗ್ರಾಮಪಂಚಾಯ್ತಿ ಅದ್ಯಕ್ಷರಾದ ಚಂದ್ರಿಕಾ ನಾಗರಾಜ್, ಸದಸ್ಯರಾದ ಅಶೋಕ್, ಗಾಯತ್ರಿ ಮುನಿರೆಡ್ಡಿ, ಸುಜಿತ್ ಪ್ರಸಾದ್, ಮುನಿರಾಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.