ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ

ಕುಂದಗೋಳ,ಜ11: ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಯ 27 ಲಕ್ಷ ರುಗಳ ಮೊತ್ತದ ಭೂಮಿ ಪೂಜೆಯನ್ನು ಶಾಸಕರಾದ ಕುಸುಮಾವತಿ ಚ ಶಿವಳ್ಳಿಯವರು ನೆರವೇರಿಸಿದರು.
ನಂತರ ಮಾತನಾಡಿದ ಅವರು ಕರ್ನಾಟಕ ನೀರಾವರಿ ನಿಗಮದ ಮೂಲಕ ಎಸ್.ಸಿ.ಪಿ ಟಿ.ಎಸ್ ಪಿ ಯೋಜನೆ ಅಡಿಯಲ್ಲಿ ತಡೆಗೋಡೆ ಹಾಗು ಸಿ.ಸಿ ರಸ್ತೆ ನಿರ್ಮಾಣ ತಮ್ಮ ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದು ಭೂಮಿ ಪೂಜೆ ನೆರವೇರುತ್ತಿರುವುದು ತುಂಬಾ ಹರ್ಷವಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಾಬಣ್ಣ ಬೆಟಗೇರಿ,ಎಲ್.ಎಸ್ ಕುರಿ,ಬಿ.ಟಿ ಗೊಬ್ಬರಗುಂಪಿ, ಅಯ್ ಜಿ ಮೇಟಿ,ಬಸವರಾಜ ಕಬ್ಬೆರಳ್ಳಿ, ಬಸಣ್ಣ ಕೋರಿ,ತಮ್ಮನ್ನ ಕಲಬಾರ,ಚನ್ನವೀರಯ್ಯ ಹಿರೇಮಠ ಹನಮಂತಪ್ಪ ಇಟಿ ಮಹಾದೇವಪ್ಪ ಬಡಪ್ಪನವರ ಗ್ರಾಪಂ ಅದ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಸರ್ವಸದಸ್ಯರು ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.