ಸಿಸಿ ಕ್ಯಾಮರಾ ಅಳವಡಿಕೆ

ಮುದ್ದೇಬಿಹಾಳ :ನ.3: ಸರಕಾರದ ನಿಯಮದಂತೆ ಬೇಳೆಯುತ್ತಿರುವ ಪಟ್ಟಣದ ಪ್ರಮೂಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಿದ್ದೇವೆ, ಈ ಸಿಸಿ ಟಿವಿ ಕ್ಯಾಮರಾವನ್ನು ಅಳವಡಿಸುವದರಿಂದ ಕೆಲವು ಅಪರಾದಗಳನ್ನುಮತ್ತು ಅಪಘಾತವನ್ನು ತಡೆಯಬಹುದು, ಮತ್ತು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ, ಇತ್ತೇಚಿಗೆ ಬಹುತೇಕ ನಗರಗಳಲ್ಲಿ ಸಿಸಿ ಕ್ಯಾಮರಾಗಳು ಅವಶ್ಯಕವಾಗಿ ಬೇಕಾಗುತ್ತವೆ, ಎಂದು ಜಿಲ್ಲಾ ಪೋಲಿಸ್ ವರೀಷ್ಠಾದಿಕಾರಿ ಅನುಪಮಾ ಅಗರವಾಲ ಹೇಳಿದರು.

ಅವರು ಪಟ್ಣಣದಲ್ಲಿ ಪ್ರಮುಖ ಭಾಗಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾವನ್ನು ಉದ್ಘಾಟಿಸಿ ಮಾತನಾಡಿ ಇಂದು ನಮ್ಮ ಪೋಲಿಸ್ ಇಲಾಖೆಗೆ ಸಿಸಿ ಟಿವಿ ಕ್ಯಾಮರಾ ಅವಶ್ಯಕವಾಗಿ ಬೇಕಾಗುತ್ತದೆ, ಇದರಿಂದ ಅನೇಕ ಅಹಿತಕರ ಘಟನೆಗಳನ್ನು ತಡೆಯುವಲ್ಲಿ ಸಹಕಾರಿಯಾಗುತ್ತದೆ ಎಂದರು.

ಬಳಿಕ ಮಾತನಾಡಿದ ಸ್ಥಳೀಯ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ , ಪಟ್ಟಣದ ಹಿತಾಸಕ್ತೀಯ ದೃಷ್ಠಿಯಿಂದ 54 ಸಿಸಿ ಕ್ಯಾಮರಾವನ್ನು ಅಳವಡಿಸಿದ್ದು ಸಂತಸದ ವಿಷಯ, ಸಾರ್ವಜನಿಕರು ಸಹಕರಿಸಿದರೆ ಇನ್ನಷ್ಟು ಅಭಿವೃದ್ದಿಯನ್ನು ನಮ್ಮ ನಗರ ಸಾಧಿಸುತ್ತದೆ ಇನ್ನು ಮುಂದಿನ ದಿನಮಾನಗಳಲ್ಲಿ ತಾಳಿಕೋಟಿ, ಹಾಗೂ ಮುದ್ದೇಬಿಹಾಳದಲ್ಲಿ ಇನ್ನೂ ಹೆಚ್ಚೀನ ಅನುದಾನವನ್ನು ಸರಕಾರ ಮಟ್ಟದಲ್ಲಿ ತಂದು ಅಭಿವೃದ್ದಿ ಮಾಡಲಾಗುವದು ಪ್ರತಿಯೋಬ್ಬರು ಕೈ ಜೋಡಿಸಿದರೆ ಎಂತಹ ಕಠಿಣ ಕೆಲಸವನ್ನು ಸಹ ಸುಭವಾಗಿ ಮಾಡಲಾಗುವದು, ನಗರದಲ್ಲಿ ಸಾರ್ವಜನಿಕರ ವಲಯದಿಂದ ವ್ಯಾಪಾರಸ್ಥರು ಗಣ್ಯರು ಬ್ಯಾಂಕನವರು ಸಹಕಾರದಿಂದ ನಗರದಲ್ಲಿ 54ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದೆ, ಜನರಿಂದ ಹಣವನ್ನು ತಗೆದುಕೋಳ್ಳುವ ಮುನ್ನ ಇದರಿಂದ ಇರುವ ಲಾಭವನ್ನು ತಿಳಿ ಹೇಳಿ ಎಂದು ಪೋಲಿಸ್ ಇಲಾಖೆಗೆ ಕಿವಿ ಮಾತು ಹೇಳಿದ್ದೇ ಎಂದರು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬಸವನ ಬಾಗೇವಾಡಿ ಡಿವೈಎಸ್‍ಪಿ ಶಾಂತವೀರ , ಸಿಪಿಆಯ್ ಆನಂದ ವಾಘ್ಮೋಡೆ, ಪಿಎಸ್ ಆಯ್ ಮಲ್ಲಪ್ಪ ಮಡ್ಡಿ , ಪುರಸಭೆ ಅದ್ಯಕ್ಷರಾದ ಶ್ರೀಮತಿ ಪ್ರತಿಭಾ ಅಂಗಡಗೇರಿ, ಉಪಾದ್ಯಕ್ಷರಾದ ಶಮಶಾದಬಿ ಹುಣಶಗಿ ಇನ್ನೀತತರು ಇದ್ದರು.