
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.01: ವೀ ವಿ ಸಂಘದ ಅಂಗ ಸಂಸ್ಥೆಯಾದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್‍ನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಹೊಸ ಪಠ್ಯಕ್ರಮ ಸಿ-20 ಆಧಾರಿತ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎ.ವೀರನಗೌಡ, ನಿವೃತ್ತ ಸಹಾಯಕ ಅಭಿಯಂತರರು , ಶ್ರೀಮತಿ ಕುಪ್ಪುಗಲ್ ಗಿರಿಜಾ, ಶ್ರೀಮತಿ ಕಾತ್ಯಾಯಿನಿ ಮರಿದೇವಯ್ಯ ಮತ್ತು ಜಿ.ಎಂ.ಮಹೇಶ್‍ರವರು ಉಪಸ್ಥಿತರಿದ್ದರು. ಆರ್.ವೈ.ಎಂ.ಇ.ಸಿ ಕಾಲೇಜು ಬಳ್ಳಾರಿ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ ಹೆಚ್.ಎಂ.ಮಲ್ಲಿಕಾರ್ಜುನ ಡಾ.ಶೋಭ ಪ್ರೊಫೆಸರ್, ಡಾ.ಅದಾನಗೌಡ ಡಾ.ಸಚಿನ್ ಪಾಟೀಲ್ ಆಗಮಿಸಿದ್ದರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೆಚ್.ಎಂ.ಕಿರಣ್‍ಕುಮಾರ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಹಲಕುಂದಿ ವಿಜಯಕುಮಾರ್, ಎ.ವೀರನಗೌಡ, ಸಂಗನಕಲ್ ಚಂದ್ರಶೇಖರ್ , ಪ್ರಾಂಶುಪಾಲರಾದ ಡಾ. ಟಿ.ಎಂ.ವೀರಗಂಗಾಧರಸ್ವಾಮಿಯವರು ಸಿವಿಲ್ ವಿಭಾಗಾಧಿಕಾರಿ ಟಿ.ಗೋವಿಂದರಾಜುಲು ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು , ಸಿಬ್ಬಂದಿಗಳು ಹಾಜರಿದ್ದರು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ.ಹೆಚ್.ಎಂ.ಕಿರಣ್‍ಕುಮಾರ್ ಮಾತನಾಡುತ್ತಾ ವಿದ್ಯಾರ್ಥಿಗಳು ಶ್ರದ್ದೆಯಿಂದ ಕಲಿತು ಜೀವನದಲ್ಲಿ ತಮ್ಮ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ತಮ್ಮ ತಮ್ಮ ಬಾಷಣದಲ್ಲಿ ಡಿಪ್ಲೋಮಾ ಓದುವುದರಿಂದ ಅತಿ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಹಾಗೂ ಒಳ್ಳೆಯ ಹುದ್ದೆ ದೊರಕುವುದಲ್ಲದೆ ಜೀವನ ಸುಗಮವಾಗಿ ನಡೆಯುತ್ತದೆ ಎಂದು ತಿಳಿಸಿದರು.
ಯಾವುದೇ ಅಡ್ಡಿ ಆತಂಕಗಳು ಬಂದಾಗ ದೃತಿಗೆಡದೆ ಮುನ್ನುಗ್ಗಬೇಕು ತಮ್ಮ ಜಾಣ್ಮೆಯನ್ನು ಆಗಿಂದಾಗ್ಗೆ ನವೀಕರಿಸಿಕೊಳ್ಳಬೇಕು.ಯಾವುದೇ ಕಾರ್ಯಕ್ರಮವಿರಲಿ ಆರ್.ವೈ.ಎಂ.ಇ.ಸಿ ಕಾಲೇಜು ಬೆಂಬಲ ನೀಡುತ್ತಾ ಬಂದಿದೆ.
ಉಪನ್ಯಾಸಕರಾದ ಎಸ್ ಶಂಕರಗೌಡ ಮತ್ತು ರಾಜೇಶಕುಮಾರ್ ಜೆ.ಎಂ ಯಶಸ್ವಿಯಾಗಿ ಈ ಕಾರ್ಯಕ್ರಮದ ಆಯೋಜಿಸಿದ್ದರು.ನಿರೂಪಣೆಯನ್ನು ಸಿವಿಲ್ ವಿಭಾಗದ ಉಪನ್ಯಾಸಕಿಯಾದ ಶ್ರೀಮತಿ ಉಮ್ಮೆ ಸಲ್ಮಾ ನಡೆಸಿಕೊಟ್ಟರು ಮತ್ತು ವಂದನಾರ್ಪಣೆಯನ್ನು ಉಪನ್ಯಾಸಕರಾದ ಕುಮಾರಿ ಸಂಜನಾ ಅವರು ನಿರ್ವಹಿಸಿದರು.