ಸಿವಿಲ್ ನ್ಯಾ. ಆಯ್ಕೆಯಾದ ಗಾಯಿತ್ರಿರವರಿಗೆ ಸನ್ಮಾನ

ಬಂಗಾರಪೇಟೆ, ಜ.೨೧-ಗುರಿ ಸಾಧನೆಗೆ ಬಡತನ ನೆಪವಾಗಬಾರದು ಯಾವ ವ್ಯಕ್ತಿಯಲ್ಲಿ ಗುರಿ ಸಾಧನೆ ಹಂಬಲ, ದೃಢಸಂಕಲ್ಪ, ಅಚ್ಚಲವಾದ ವಿಶ್ವಾಸವಿರುತ್ತದೆಯೋ ಅಂತವರಿಗೆ ವಿದ್ಯಾಸರಸ್ಪತಿ ಕೃಪೆ ಇರುತ್ತದೆ ಎಂಬುದಕ್ಕೆ ಉತ್ತಮ ಚಿಕ್ಕ ಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್. ಎಂ. ರವಿ ತಿಳಿಸಿದ್ದಾರೆ.
ತಾಲ್ಲೂಕಿನ ಚಿಕ್ಕ ಅಂಕಂಡಹಳ್ಳಿಗ್ರಾಮ ಪಂಚಾಯಿತಿ ವತಿಯಿಂದ ಅಧ್ಯಕ್ಷ ಹೆಚ್ ಎಂ ರವಿ ನೇತೃತ್ವದಲ್ಲಿ ಕಾರ ಹಳ್ಳಿಯಲ್ಲಿರುವ ಗಾಯಿತ್ರಿ ರವರ ಮನೆಗೆ ಭೇಟಿ ಕೊಟ್ಟು ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಮಾತನಾಡಿದ ಹೆಚ್ ಎಂ ರವಿ ರವರು ಗಾಯಿತ್ರಿರವರು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿ ಬಂಗಾರಪೇಟೆ ತಾಲ್ಲೂಕಿಗೆ ಹಾಗೂ ಕೋಲಾರ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
ಬಡತನ ಸಾಧನೆಗೆ ಅಡ್ಡಿಯಿಲ್ಲ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಈಗ ಸಿವಿಲ್ ನ್ಯಾಯಾಧೀಶೆರಾಗಿ ಆಯ್ಕೆಯಾಗಿರುವುದು ನಮಗೆಲ್ಲ ಹೆಮ್ಮೆ ಪಡುವಂತಹ ವಿಷಯ. ಇವರು ಸ್ವತಹ ನಮ್ಮ ಗ್ರಾಮ ಪಂಚಾಯಿತಿಗೆ ಸೇರಿದ ನಮ್ಮ ಗ್ರಾಮದವರ ಆದ ನಮ್ಮ ಹೆಣ್ಣುಮಗಳು ಎಂದು ಹೇಳಲು ನನಗೆ ತುಂಬಾ ಸಂತೋಷವಾಗುತ್ತದೆ. ಗಾಯಿತ್ರಿರವರು ಇನ್ನು ಉನ್ನತ ಸ್ಥಾನ ಕೇರಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ ನಮ್ಮ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿಗೆ ಒಳ್ಳೆಯ ಹೆಸರು ತರಲಿ ಎಂದು ಶುಭ ಹಾರೈಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿಎಂ ಹರೀಶ್ ಕುಮಾರ್ ರವರು ಮಾತನಾಡಿ ಗಾಯಿತ್ರಿರವರು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿ ಇಡೀ ರಾಜ್ಯ. ಜಿಲ್ಲೆ. ತಾಲ್ಲೂಕಿಗೆ ಕೀರ್ತಿಪತಾಕೆಯನ್ನು ಆರಿಸಿದ್ದಾರೆ ಎಂದು ಹೇಳಿ ಇವರಿಗೆ ಶುಭ ಹಾರೈಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿತ್ರರವರು ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿಗೆ ಸೇರಿದ ನಾರಾಯಣಪುರದವರಾದ ಗಾಯತ್ರಿರವರು ಇಷ್ಟು ದೊಡ್ಡ ಸಾಧನೆ ಮಾಡಿದ್ದಾರೆ ಸಂತೋಷದ ವಿಷಯ ಗಾಯತ್ರಿ ರವರಿಗೆ ನನ್ನ ಅಭಿನಂದನೆಗಳು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಾಯಿತ್ರಿರವರು ನನ್ನನ್ನು ಸನ್ಮಾನಿಸಿದ ಚಿಕ್ಕ ಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಹಾಗೂ ಎಲ್ಲಾ ಸದಸ್ಯರಿಗೆ, ಸಿಬ್ಬಂದಿ ವರ್ಗದವರಿಗೆ ನನ್ನ ಧನ್ಯವಾದಗಳು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಂ. ರವಿ. ನಿರ್ಗಮಿತ ಅಧ್ಯಕ್ಷ ಸಿ.ಎಂ. ಹರೀಶ್ ಕುಮಾರ್. ಗ್ರಾಮ ಪಂಚಾಯತಿ ಸದಸ್ಯರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿತ್ರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.