ಸಿಲ್ಕ್ ಇಂಡಿಯಾ ಪ್ರದರ್ಶನ, ಮಾರಾಟಕ್ಕೆ ಚಾಲನೆ


ಹುಬ್ಬಳ್ಳಿ,ಅ.29- ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ‘ಸಿಲ್ಕ್ ಇಂಡಿಯಾ 2020’ ನಗರದ ನಿವೀನ್ ಹೋಟೆಲ್‍ನಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಕಿಮ್ಸ್‍ನ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಅವರು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿದರು. ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆಗಳ ಉತ್ಪಾದಕರು, ಸೀರೆ ವಿನ್ಯಾಸಕರು ಹಾಗೂ ರೇಷ್ಮೆ ಸಹಕಾರ ಸಂಘಗಳ 50 ರಷ್ಟು ಮಳಿಗೆಗಳಲ್ಲಿ ವಿವಿಧ ರಾಜ್ಯಗಳ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳು ಮೇಳದಲ್ಲಿ ಲಭ್ಯವಿವೆ. ನವೆಂಬರ್ 1ರವರೆಗೆ ಪ್ರತಿನಿತ್ಯ ಬೆಳಿಗ್ಗೆ 10.30 ರಿಂದ ರಾತ್ರಿ 8.30ರ ವರೆಗೆ ಪ್ರದರ್ಶನ ಮತ್ತು ಮಾರಾಟ ಇರಲಿದೆ.
ಟಸ್ಸಾರ್, ಜಾರ್ಜೆಟ್, ಅರಿಣಿ, ಧರ್ಮಾವರಂ, ಕಾಂಚಿಪುರಂ, ಢಾಕ, ಬಲಚೂರಿ, ಮಟ್ಕಾ, ಬಾಗಲ್‍ಪುರ್, ಮುಲ್‍ಬಾರಿ, ಸಿಲ್ಕ್, ಚಂದೇರಿ, ಕೋಲ್ಕತ್ತಾ ಗಣಪತಿ ಸೀರೆಗಳು ಹಾಗೂ ಕುರ್ತಾ, ಸ್ಟೋಲ್ಸ್, ಶಾಲುಗಳು, ಸಲ್ವಾರ್ ಕಮೀಜ್, ಕುಶನ ಕವರ್, ಬೆಡ್‍ಶೀಟ್‍ಗಳ ಪ್ರದರ್ಶನದಲ್ಲಿವೆ. ಒಂದೇ ಸೂರಿನಡಿ ದೇಶದ 19 ರಾಜ್ಯಗಳ ಸಾಂಪ್ರದಾಯಿಕ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.