
ಸಂಜೆವಾಣಿ ವಾರ್ತೆ
ಹೊಸಪೇಟೆ ಜು5: ಹಂಪಿಯಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದ ವೇಳೆ ಸಿಲೆಂಡರ್ ಸ್ಪೋಟಗೊಂಡು ವಾಹನಯೊಂದು ಧಗಧಗನೇ ಹೊತ್ತಿ ಉರಿದ ಘಟನೆ ತಾಲ್ಲೂಕಿನ ಕಡ್ಡಿರಾಂಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಜಿ- 20 ನಿಮಿತ್ತ ಕಡ್ಡಿರಾಂಪುರ ಗ್ರಾಮದ ಬಸ್ ನಿಲ್ದಾಣದ ಬಳಿ ಕಾಮಗಾರಿ ರಸ್ತೆ ಹಂಚಿನಲ್ಲಿ ಬಿಳಿ ಬಣ್ಣದ ಪಟ್ಟಿ ಹಾಕಲಾಗುತ್ತಿತ್ತು. ಈ ವೇಳೆ ಏಕಾಏಕಿ ಪ್ರಾಕ್ಸಿಏರ್ ಸಿಲಿಂಡರ್‍ನಲ್ಲಿ ಸೋರಿಕೆಯಾಗಿ ಸಿಲೆಂಡರ್ ಸ್ಪೋಟಗೊಂಡಿವೆ. ಅದೃಷ್ಠವಾಶತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ವಾಹನದಲ್ಲಿದ್ದ 6 ಸಿಲೆಂಡರ್‍ಗಳಲ್ಲಿ ಮೂರು ಸಿಲಿಂಡರ್‍ಗಳು ಸ್ಫೋಟಗೊಂಡಿದ್ದು, ಕಾಮಗಾರಿ ನಿರ್ವಹಿಸುತ್ತಿದ್ದ ಮಹಿಂದ್ರಾ ಬುಲೆರೋ ವಾಹನ ಬೆಂಕಿಗಾಹುತಿಯಾಗಿದೆ. ವಾಹನದಲ್ಲಿ ಬಾಯ್ಲರ್, ಮಾರ್ಕಿಂಗ್ ಮಷಿನ್ ಸುಟ್ಟು ಕರಕಲಾಗಿವೆ ಎಂದು ಅಗ್ನಿ ಶಾಮಕ ಸಿಬ್ಬಂದಿ ಮಾಹಿತಿ ನೀಡಿದರು.
ಘಟನೆಯಿಂದ ಗ್ರಾಮದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿಮಾರ್ಣಗೊಂಡಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಹೊಸಪೇಟೆಯ ಅಗ್ನ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದರು.
ತಾಲೂಕಿನ ಐತಿಹಾಸಿಕ ಹಂಪಿಯಲ್ಲಿ ಜು.9 ರಿಂದ 16ರ ವರೆಗೆ ಆಯೋಜಿಸಿರುವ ಜಾಗತಿಕ ಮಟ್ಟದ ಜಿ- 20 ಶೃಂಗಸಭೆ ಹಿನ್ನೆಲೆಯಲ್ಲಿ ರಸ್ತೆ ಸುಧಾರಣೆ ಕಾಮಗಾರಿ ಹಮ್ಮಿಕೊಂಡಿದೆ. ಕಡ್ಡಿರಾಂಪುರ ಕ್ರಾಸ್ ನಿಂದ ಕಡ್ಡಿರಾಂಪುರ, ಪ್ರಕಾಶ ನಗರ ಮಾರ್ಗವಾಗಿ ಹಂಪಿ ವರೆಗೆ ರಸ್ತೆ ಡಾಂಬರೀಕರಣ ಮಾಡಲಾಗಿದ್ದು, ರಸ್ತೆ ಮಧ್ಯೆ ಮತ್ತು ಹಂಚಿನಲ್ಲಿ ವೈಟ್ ಲೈನಿಂಗ್ ಮಾಡಲಾಗುತ್ತಿದೆ.