ಸಿಲಿಂಡರ್ ಸ್ಪೋಟ; ಬೆಂಕಿಗೆ ಆಹುತಿಯಾದ ಹಣ

ದಾವಣಗೆರೆ.ಏ.೧೭; ನಗರದ ಬಸವರಾಜ‍‍ಪೇಟೆಯ ಹುಬ್ಲಿ ಚೌಡಪ್ಪ ರಸ್ತೆಯಲ್ಲಿ ಮನೆಯೊಂದರಲ್ಲಿ ಸಿಲಿಂಡರ್ ಸೋರಿಕೆಯಗಿ ಹಲವು ವಸ್ತುಗಳು ಭಸ್ಮವಾಗಿವೆ. ಅಲ್ಲದೇ ರಂಜಾನ್ ಹಬ್ಬಕ್ಕೆ ಜೋಡಿಸಿದ್ದ ಹಣವೂ ಬೆಂಕಿಗೆ ಆಹುತಿಯಾಗಿದೆ.ಆಟೊ ಚಾಲಕ ಜಿಲಾನಿ ಅವರ  ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಎರಡು ಮನೆಗಳು ಹೊತ್ತಿ ಉರಿದಿವೆ. ಅಲ್ಲದೇ ರಂಜಾನ್ ಹಬ್ಬಕ್ಕೆ ಕೂಡಿಸಿದ್ದ ₹ 100ರ ನೋಟುಗಳ ಕಂತೆ ಭಸ್ಮವಾಗಿದೆ. ಹಣ ಎಷ್ಟು ಇತ್ತು ಎಂಬುದು ತಿಳಿದು ಬಂದಿಲ್ಲ. ಮನೆಯಲ್ಲಿದ್ದ ಪಾತ್ರೆ ಪಗಡೆ, ಬಟ್ಟೆ, ಚಿನ್ನ ಬೆಳ್ಳಿ ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.