ಸಿಲಿಂಡರ್ ಬೆಲೆ ಹೆಚ್ಚಳ ಎಎಪಿ ಪ್ರತಿಭಟನೆ

ರಾಯಚೂರು, ಮಾ.೦೨-ಗೃಹ ಬಳಕೆಯ ಮತ್ತು ವಾಣಿಜ್ಯ ಬಳಕೆಯ ಅನೀಲ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರ ನಿಲುವು ಖಂಡಿಸಿ ಎಎಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ನಿತ್ಯ ಬೆಲೆ ಏರಿಕೆ ಆಗುತ್ತಿರುವ ಬಗ್ಗೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬರೆ ಎಲೆಯುತ್ತಿದ್ದಾರೆ. ಬಡವರ ಹೊಟ್ಟೆ ಮೇಲೆ ಬಿಜೆಪಿ ಹೊಡೆಯುತ್ತಿರುವ ಕೇಂದ್ರ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೃಹ ಬಳಕೆಯ ದರವನ್ನು ರೂ.೫೦ ಮತ್ತು ವಾಣಿಜ್ಯ ಇದರ ೧೫೦೨- ಹೆಚ್ಚಿಗೆ ಮಾಡಿರುವರು, ಇದು ಜನ ಸಾಮಾನ್ಯರ ಮೇಲೆ ಹೊರ ಮೇಲೆ ಹೊರ ಹಾಕುತ್ತಿರುವ ಕೇಂದ್ರ ಸರಕಾರಕ್ಕೆ ಧಿಕ್ಕಾರ ಕೂಗಿದರು. ಬೆಲೆ ಏರಿಕೆಯನ್ನು ರದ್ದುಪಡಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿ. ವೀರೇಶಕುಮಾರ ಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು.