
ರಾಯಚೂರು, ಮಾ.೦೪- ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಎಸ್ ಯು ಸಿ ಐ ಜಿಲ್ಲಾ ಸಮತಿ ಕೇಂದ್ರ ಸರಕಾರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ನಗರದ ನಗರಸಭೆ ಹತ್ತಿರ ಸಿಲಿಂಡರ್ ಪ್ರತಿಕೃತಿ
ದಹನ ಮಾಡಿ ಕೇಂದ್ರ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಲಿಂಡರ್ ಸೇರಿದಂತೆ ದಿನನಿತ್ಯದ ಬಳಸುವ ಅಗತ್ಯ ಪದಾರ್ಥ ಬೆಲೆ ಏರಿಕೆಯಿಂದ ದೇಶದ ರೈತರು, ಕಡುಬಡವರು, ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೇ ಕೂಡಲೇ ಸಿಲಿಂಡರ್ ಬೆಲೆಯನ್ನು ರದ್ದುಪಡಿಸಬೇಕೆಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು. ಸಿಲಿಂಡರ್ ಬೆಲೆ ರದ್ದುಪಡಿಸಿ ಸಬ್ಸಿಡಿ ದರವನ್ನು ಹೆಚ್ಚಳ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಎಲ್ ಪಿಜಿ ಸಿಲಿಂಡರ್ ದರವನ್ನು ರೂ. ೫೦ ರಷ್ಟು ಏರಿಕೆಯಾಗಿದೆ. ಕಳೆದ ವರ್ಷದಿಂದ ಸತತವಾಗಿ ೬ ನೇ ಭಾರಿ ಸಿಲಿಂಡರ್ ಬೆಲೆ ಹೆಚ್ಜಳ ಮಾಡಿ ಜನಸಾಮಾನ್ಯರ ಮೇಲೆ ಕೇಂದ್ರ ಸರ್ಕಾರ ಬರೆ ಎಳೆಯುತ್ತಿದೆ ಎಂದು ಆಕ್ರೋಶ ಅಸಮಾಧಾನ ಹೊರಹಾಕಿದರು. ಕೇಂದ್ರ ಸರ್ಕಾರವು ಬಡವರಿಗೆ ಉಜ್ವಲ ಯೋಜನೆಯಡಿ ಉಚಿತವಾಗಿ ಅನಿಲ ಸಂಪರ್ಕ ಯೋಜನೆ ಜಾರಿ ತಂದಿದ್ದು, ಫಲಾನುಭವಿಗಳು ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಖರೀದಿ ಮಾಡುವ ಅನಿವಾರ್ಯ ಎಂದು ಕೇಂದ್ರ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಂದ್ರಗಿರೀಶ್, ವೀರೇಶ್ ಎನ್‌ಎಸ್, ಚನ್ನಬಸವ ಜಾನೇಕಲ್ ಹಾಗೂ ಮಹೇಶ್ ಚೀಕಲಪರ್ವಿ, ಮಲ್ಲನಗೌಡ, ಹಾಳಪ್ಪ, ವಿನೋದ ಕುಮಾರ್, ಪೀರಸಾಬ್, ಕಾರ್ತಿಕ, ಹೇಮಂತ್, ಅಪೂರ್ವ, ಯಲ್ಲಪ್ಪ ಸೇರಿದಂತೆ ಉಪಸ್ಥಿತರಿದ್ದರು.