
ಲಕ್ಷ್ಮೇಶ್ವರ,ಮಾ3: ಸಿಲಿಂಡರ್ ದರವನ್ನು ಏಕಾಏಕಿ ಮತ್ತೇ ಏರಿಕೆ ಮಾಡಿರುವ ಕೇಂದ್ರ ಸರಕಾರದ ಜನವಿರೋದಿ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಸಿಲಿಂಡರ್ ಪ್ರದರ್ಶಿಸಿ ಪ್ರಧಾನ ಮಂತ್ರಿ ನರೇಂದ್ರಮೋದಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಡಬಲ್ ಇಂಜಿನ್ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಬಳಿಕ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ದೊಡ್ಡಗೌಡ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್.ಕೊಪ್ಪದ ಕಾಂಗ್ರೆಸ್ ಮುಂಖಡ ಸೋಮಣ್ಣ ಬೇಟಗೇರಿ ಇವರುಗಳು ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಗ್ರಾಮೀಣ ಮಹಿಳೆಯರು ಅಡುಗೆ ಮನೆಯಲ್ಲಿ ಕಟ್ಟಿಗೆ ಕುಳ್ಳು ಹಚ್ಚಿ ಅಡಿಗೆ ಮಾಡುತ್ತಿರುವುದರಿಂದ ಹೊಗೆಯಿಂದ ಅವರ ಕಣ್ಣು ಹಾಳಾಗುತ್ತೇವೆ ಎಂದು ನಂಬಿಸಿ ಉಚಿತ ಸಿಲಿಂಡರ್ ನೀಡಿ ಈಗ ಅದೇ ಬಡವರು ಸಿಲಿಂಡರ್ ಖರೀದಿಗಾಗಿ ಕಣ್ಣೀರು ಸುರಿಸುವಂತಾಗಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ನಗರ ಘಟಕದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಂಬರೀಶ್ ತೆಂಬದಮನಿ ನೀಲಪ್ಪ ಪಡಗೇರಿ ರಾಜು ಮಡಿವಾಳರ ಪರಮೇಶ ಲಮಾಣಿ ಯಲ್ಲಪ್ಪ ಹಂಜಿ ಬರಮ್ಮಣ್ಣ ರೋಟಿಗವಾಡ ಬಾಬು ಅಳವಂಡಿ ಅಣ್ಣಪ್ಪ ರಾಮಗೇರಿ ಅಫಜಲ್ ರಿತ್ತಿ ಮಾನಪ್ಪ ಲಮಾಣಿ ಗೇಮಪ್ಪ ಲಮಾಣಿ ಪಾಲ್ಗೊಂಡಿದ್ದರು.