ಸಿರ್ಸಿ ಗ್ರಾಮದ ರಸ್ತೆ ದುರಸ್ತಿಗೆ ಮನವಿ

ಬೀದರ ಜು 29: ಬೀದರ ತಾಲೂಕಿನ ಸಿರ್ಸಿ (ಎ) ಗ್ರಾಮದ ಸಾರ್ವಜನಿಕ ಮುಖ್ಯ ರಸ್ತೆಯ ಸುಮಾರು 200 ಮೀಟರ್ ಭಾಗ ಬಹಳ ಹದಗೆಟ್ಟಿದ್ದು, ಸಂಪೂರ್ಣ ತಗ್ಗು-ಗುಂಡಿಗಳು ಬಿದಿದ್ದು,ತಕ್ಷಣ ದುರಸ್ತಿ ಮಾಡಿಸುವಂತೆ ಸಿರ್ಸಿ(ಎ) ಗ್ರಾಪಂ ಮಾಜಿ ಸದಸ್ಯ ಮಾರುತಿ ಮಾಸ್ಟರ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ರಸ್ತೆ ಸುಧಾರಣೆಮಾಡುವಂತೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮತೆಗೆದುಕೊಂಡಿಲ್ಲ. ಈಗಾಗಲೇ ಖಾಶೆಂಪೂರ (ಸಿ)ಗ್ರಾಮದಿಂದ ಸಿರ್ಸಿ ಗ್ರಾಮದವರೆಗೆ ರಸ್ತೆ ಡಾಂಬರೀಕರಣ ಮಾಡಿ,ಉಳಿದ 200 ಮೀಟರ್ ರಸ್ತೆ ಕಾಮಗಾರಿ ಮಾಡದೇಅಪೂರ್ಣಗೊಳಿಸಿರುತ್ತಾರೆ. ಅನುದಾನ ಬಂದ ನಂತರ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಕಳೆದ 4-5 ವರ್ಷಗಳಿಂದ
ಹೇಳುತ್ತಲೇ ಬರುತ್ತಿದ್ದಾರೆ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.