ಸಿರುಗುಪ್ಪ: ಹತ್ತಿಯಲ್ಲಿ ಮದ್ಯದ ಸ್ಟಾಕ್


(ಸಂಜೆವಾಣಿ ಪ್ರತಿನಿಧಿಯಿಂದ)
ಸಿರುಗುಪ್ಪ, ಏ.21: ಮದ್ಯದ ವಾಸನೆ ಎಲ್ಲಿದ್ದರೂ ಬರುತ್ತದೆ ಅಬಕಾರಿ ಇಲಾಖೆಗೆ ಎಂಬಂತೆ. ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗ್ರಾಮದ ಶೆಡ್ ಒಂದರಲ್ಲಿ ಹತ್ತಿ ಮಧ್ಯೆ ಇಟ್ಟಿದ್ದ 20 ಬಾಕ್ಸ್ ಮದ್ಯವನ್ನು ಅಬಕಾರಿ ಇಲಾಖೆ ಸಿಬ್ಬಂದಿ ಪತ್ತೆಹಚ್ಚಿದೆ.
ಅಬಕಾರಿ ನಿರೀಕ್ಷಕ ತುಕರಾಂ ನಾಯ್ಕ ಮತ್ತವರ ಸಿಬ್ಬಂದಿ ತಮಗೆ ದೊರೆತ ಖಚಿತ ಮಾಹಿತಿ ಮೇರೆಗೆ  ಸಿರುಗುಪ್ಪ ತಾಲ್ಲೂಕಿನ ಅಲ್ಬನೂರು ಗ್ರಾಮದ ನಾಗಪ್ಪ ಅವರ ಮನೆಮೇಲೆ ದಾಳಿ ಮಾಡಿದಾಗ ಅಲ್ಲಿನ  ಶಡ್ ನಲ್ಲಿ 20 ಮದ್ಯದ ಬಾಕ್ಸ್ ಗಳು ಹತ್ತಿ ಮಧ್ಯೆ ಬಚ್ಚಿಡಲಾಗಿತ್ತು.
67 ಸಾವಿರ ರೂ ಮೌಲ್ಯದ 172 ಲೀ  ಒರಿಜನಲ್ ಚಾಯ್ಸ್ ಮದ್ಯ ಇದಾಗಿದೆ. ಆರೋಪಿ ಪರಾರಿಯಾಗಿದ್ದಾನೆ.