ಸಿರುಗುಪ್ಪ: ಸರ್ಕಾರದ ಜೋಳ ಕದ್ದಿದ್ದ
ನಾಲ್ವರು ಆರೋಪಿಗಳ ಬಂಧನ – 10 ಲಕ್ಷ ರೂ ವಶ.


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,19-  ಸಾರ್ವಜನಿಕರಿಗೆ ಪಡಿತರ ವ್ಯವಸ್ಥೆಯಲ್ಲಿ ವಿತರಣೆಯಾಗಬೇಕಿದ್ದ  7282 ಕ್ಲಿಂಟಲ್ ಜೋಳವನ್ನು ಗೋದಾಮುಗಳಿಂದ ಮಂಗ ಮಾಯಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಸಿರುಗುಪ್ಪ ಪೊಲೀಸರು ನಾಲ್ವರನ್ನು ಬಂಧಿಸಿ 10 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.
ಸರ್ಕಾರಿ ಗೋದಾಮಿನಿಂದಲೇ ಜೋಳವನ್ನು ನಾಪತ್ತೆ ಮಾಡಿದ್ದರ ಬಗ್ಗೆ  ಜು 6 ರಂದು  ಸಿರುಗುಪ್ಪ ಠಾಣೆಯಲ್ಲಿ  ಪ್ರಕರಣ ದಾಖಲು ಮಾಡಿ ಇಬ್ಬರು ಆರೋಪಿತರನ್ನು ಬಂಧಿಸಿತ್ತು.
ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದ ಪೊಲೀಸರು  ಪ್ರಕರಣದ ಮುಖ್ಯ ಆರೋಪಿ ಸಿರುಗುಪ್ಪದ ಕೆ.ಎಸ್.ಸಿ.ಎಸ್.ಸಿ ಗೋಡೌನ್ ನ ಮ್ಯಾನೇಜರ್ ಎಂ.ಬಸವರಾಜನಿಂದ  10 ಲಕ್ಷ ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಮತ್ತು ಈತನ  ಜೊತೆ  ಶಾಮೀಲಾಗಿರುವ ಆರೋಪದ ಮೇಲೆ  ಇನ್ನಿತರ ನಾಲ್ವರನ್ನು ಬಂಧಿಸಿದ್ದಾರೆ.  ಪ್ರಕರಣದಲ್ಲಿ ಜೋಳವನ್ನು ಸಾರ್ವಜನಿಕರಿಗೆ ವಿತರಣೆ ಮಾಡದೇ ಆರೋಪಿತ  ಜೊತೆ ಸೇರಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆಂದು. ಸಿರುಗುಪ್ಪ ಎಪಿಎಂಸಿಯಲ್ಲಿನ ಕೆ.ಡಬ್ಲೂ.ಸಿ ಗೋಡೌನ್ ನ ಮ್ಯಾನೇಜರ್  ಅನುಪಮ ಅವರನ್ನು.‌ ಸಿರುಗುಪ್ಪ ಪಟ್ಟಣದ ಮಲ್ಲಿಕಾರ್ಜನ  ವಿರುಪಾಕ್ಷಿ ಮತ್ತು ಗೋಪಾಲ್ ಇವರು ಅಕ್ರಮ ವ್ಯವಹಾರ ಮಾಡಲು ಸಹಕಾರ ನೀಡಿದ್ದಾರೆಂದು ಬಂಧಿಸಿದೆ.
ವಿರುಪಾಕ್ಷಿ ಅವರು ಸಿರುಗುಪ್ಪದ ವ್ಯಾಪಾರಿಯಾಗಿದ್ದಾರೆ. ಇವರು 1680 ಕ್ವಿಂಟಲ್ ಜೋಳವನ್ನು ರೈತರ ಹೆಸರಿನಲ್ಲಿ ನಕಲು ದಾಖಲೆಗಳನ್ನು ಸೃಷ್ಟಿ ಮಾಡಿ ಜೋಳ ಖರೀದಿಸಿರುವ ರೀತಿ ನಕಲ ಬಿಲ್‌ಗಳನ್ನು ತಯಾರಿಸಿ ಅವ್ಯವಹಾರ ಮಾಡಿದ್ದಾರೆಂಬ ಆರೋಪ.
ಸಿರುಗುಪ್ಪದ ಎಪಿಎಂಸಿಯಲ್ಲಿನ  ಕೆ.ಡಬ್ಲ್ಯೂಸಿ ಗೋಡೌನ್ ನ ಡಾಟಾ ಆಪರೇಟರ್ ಬಾಲಜಿ ಸಹ  ಶಾಮೀಲಾಗಿ ಅವ್ಯವಹಾರ ಮಾಡಲು ಸಹಕಾರ ನೀಡಿರುತ್ತಾರೆಂದು ಆರೋಪಿಸಿದೆ.  ಒಟ್ಟು 16 ಜನರ ವಿರುದ್ದ ಎಫ್ ಐ ಆರ್ ದಾಖಲು ಮಾಡಿದ್ದು ತನಿಖೆ ಮತ್ತು ಇತರೇ ಆರೋಪಿಗಳ ಪತ್ತೆ ಕಾರ್ಯ   ಮುಂದುವರೆದಿದೆ.