
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.22: ತಾಲ್ಲೂಕಿನ ರಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಿಗನೂರು ಗ್ರಾಮದ ಕೊಟ್ರೇಶ್ ಗೌಡ ಇವರ ಮನೆಯ ತಗಡಿನ ಹಂಚುಗಳು ಗಾಳಿಗೆ ಹಾರಿ ಹೋಗಿದ್ದು, ರಾರಾವಿಯಲ್ಲಿ ನಾಲ್ಕು ವಿದ್ಯುತ್ ಕಂಬ ಹಾಗೂ ಹತ್ತಕ್ಕೂ ಹೆಚ್ಚು ಮರಗಳು ಉರುಳಿವೆ.
ಶಾನವಾಸಪುರ ಗ್ರಾಮದ ರೈತ ಹೆಚ್. ಶಿವಶಂಕರ ಗೌಡ ಇವರ ಎರಡು ಎಕರೆ ಬಾಳೆ ತೋಟ ಬಹುತೇಕ ನೆಲಕಚ್ಚಿದ್ದು ತೋಟದಲ್ಲಿದ್ದ ಸಪೋಟ, ಕಬ್ಬು , ತೆಂಗು ಹಾಗೂ ದನದ ಸೆಡ್ಡು ಸೇರಿದಂತೆ ಅಂದಾಜು ರೂ 3.5 ಲಕ್ಷ ರೂ ಮೌಲ್ಯದ ಬೆಳೆ ನಾಶವಾಗಿದೆ. ಇದೇ ಗ್ರಾಮದ ಮತ್ತೊರ್ವ ರೈತ ಇಮಾಮ್ ಹುಸೇನ್ ಇವರ ಎರಡು ಎಕರೆ ತೋಟದಲ್ಲಿ 300 ನುಗ್ಗೆ ಗಿಡ, 10 ಹೆಬ್ಬೇವು ಹಾಗೂ 20 ಬಾಳೆ ಗಿಡ ನೆಲಕಚ್ಚಿದೆ. ಅಂದಾಜು 1 ಲಕ್ಷ ಸಂಭವಿಸಿದೆ ಎಂದು ರೈತರು ತಿಳಿಸಿದ್ದಾರೆ.