ಸಿರುಗುಪ್ಪ : ಬಿ.ಎಂ.ನಾಗರಾಜ್ ಗೆ ಗೆಲುವು ಸಿದ್ದಪ್ಪನ ಅರ್ಭಟಕ್ಕೆ ಸೋಮಲಿಂಗಪ್ಪಗೆ ಸೋಲಾಯ್ತು.


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.13: ಜಿಲ್ಲೆಯ ಸಿರುಗುಪ್ಪ ಕ್ಷೇತ್ರದ ಹಾಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರಿಗೆ ಅವರ ಪುತ್ರ ಸಿದ್ದಪ್ಪನ ಆರ್ಭಟವೇ ಸೋಲಿಗೆ ಕಾರಣ ಆಯ್ತು ಎನ್ನುತ್ತಿವೆ. ಕ್ಷೇತ್ರದ ಮೂಲಗಳು.
ಈ ಬಾರಿ ಚುನಾವಣೆಯಲ್ಲಿ ತಂದೆಯ ಬದಲಾಗಿ ಕಣಕ್ಕಿಳಿಯಬೇಕೆಂದು ಬಯಸಿದ್ದ ಸಿದ್ದಪ್ಪ ಸಾಮಾಜಿಕ ಜಾಲತಾಣಗಳ ಪ್ರಚಾರದಿಂದ ಭರ್ಜರಿ ಆರ್ಭಟ ನಡೆಸಿದ್ದರು.
ಅಷ್ಟೇ ಅಲ್ಲದೆ ಸರ್ಕಾರಿ ಕಛೇರಿ, ಅಭಿವೃದ್ಧಿ ಕಾಮಗಾರಿ, ವರ್ಗಾವಣೆ ಧಂದೆಗಳಲ್ಲಿ ಇವರ ಪ್ರವೇಶ ಇಲ್ಲದೆ ಆಗುತ್ತಿರಲಿಲ್ಲ ಎಂಬ ಆರೋಪ ಇತ್ತು. ಸ್ವತಃ ತಂದೆ ಸೋಮಲಿಂಗಪ್ಪನವರಿಗೆ ಈ ಬಾರಿ ಅದೃಷ್ಠ ಇಲ್ಲ. ಸಿದ್ದಪ್ಪ ಸ್ಪರ್ಧೆಯೇ ಸರಿ ಎಂಬ ಮಾತುಗಳನ್ನು ಕೆಲವರಿಂದ ತಂದೆಗೆ ಹೇಳಿಸಿದ್ದರಂತೆ ಒಟ್ಟಾರೆ ಸಿದ್ದಪ್ಪನ ಆರ್ಭಟ, ಸೋಮಲಿಂಗಪ್ಪ ಅವರಿಗೆ ಆಡಳಿತ ವಿರೋಧಿ ಅಲೆ, ಚೊಕ್ಕಬಸನಗೌಡ ಅವರು ಕಾಂಗ್ರೆಸ್ ಜಂಪ್ ಆಗಿದ್ದು ಕೆ.ಆರ್.ಪಿ ಇವರ ಮತಗಳನ್ನು ಕಸಿದಿದ್ದು. ಬಿ.ಎಂ.ನಾಗರಾಜ್ ಅವರ ಗೆಲುವಿಗೆ ಕಾರಣವಾಗಿರಬಹುದು. ಇದಷ್ಟು ಅಲ್ಲದೆ ಕಾಂಗ್ರೆಸ್ ಅಲೆ, ಗ್ಯಾರೆಂಟಿಗಳನ್ನು ನಂಬಿರುವ ಮತದಾರ ಬಿಜೆಪಿಯಿಂದ ಮುನಿಸಿಕೊಳ್ಳಲು ಕಾರಣವಾಗಿರಬಹುದು.
ಕಾಂಗ್ರೆಸ್ ನ ಬಿ.ಎಂ.ನಾಗರಾಜ್ ಅವರು 90429 ಮತ ಪಡೆದು 36849 ಮತಗಳ ಅಂತರದಿಂದ ಆಯ್ಕೆಯಾದರೆ ಹಾಲಿ ಶಾಸಕ ಬಿಜೆಪಿಯ ಸೋಮಲಿಂಗಪ್ಪ ಕೆ.ಆರ್.ಪಿ ಅಭ್ಯರ್ಥಿ ಸರಿಯಾಗಿ ಪುಟ್ಬಾಲ್ ಆಡಲು ಬಾರದೆ 18538 ಮತಗಳನ್ನು ಪಡೆಯಲು ಶಕ್ತರಾಗಿದ್ದಾರೆ.