ಸಿರುಗುಪ್ಪ ಬರಗಾಲ ತಾಲ್ಲೂಕು ಎಂದು ಘೋಷಿಸುವಂತೆ ಮನವಿ.


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.01 : ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳಿಂದ ಸಿರುಗುಪ್ಪ ತಾಲ್ಲೂಕನ್ನು ಬರಗಾಲ ಪಿಡೀತ ತಾಲ್ಲೂಕು ಎಂದು ಘೋಷಣೆ ಮಾಡಿ, ಬಿತ್ತನೆ ಮಾಡಿ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರಧನ ನೀಡಲು ಸರ್ಕಾರ ಕ್ರಮತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಎಚ್.ವಿಶ್ವನಾಥ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಎಸ್.ಎಂ.ಹನುಮಂತಪ್ಪ ಮಾತನಾಡಿ, ಸಿರುಗುಪ್ಪ ತಾಲ್ಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಇರುವುದರಿಂದ ಈಗಾಗಲೇ ಬಿತ್ತನೆ ಮಾಡಿದ ರೈತರು ಬಿತ್ತನೆಗಾಗಿ ಸಾವಿರಾರು ರೂಗಳನ್ನು ವೆಚ್ಚಮಾಡಿದ್ದಾರೆ, ಆದರೆ ಮಳೆ ಸಕಾಲಕ್ಕೆ ಮಳೆಬಾರದೆ ಇರುವುದರಿಂದ ಬಿತ್ತಿದ ಬೆಳೆಗಳು ಒಣಗಿ ಹೊಗುತ್ತಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ, ಅಲ್ಲದೆ ತಾಲ್ಲೂಕಿನ ರೈತರ ಜೀವನಾಡಿ ನದಿಗಳಾದ ತುಂಗಭದ್ರಾ, ವೇದಾವತಿ ಹಗರಿನದಿ, ದೊಡ್ಡಹಳ್ಳ ನೀರಿಲ್ಲದೆ ಬತ್ತಿ ಹೋಗಿದ್ದು, ಬಿತ್ತಿದ ಬೆಳೆಗಳು ನೀರಿಲ್ಲದೆ ಹಾಳಾಗಿವೆ, ನದಿ ಪಾತ್ರದಲ್ಲಿ ಜನ ಜನುವಾರುಗಳಿಗೆ ನೀರಿನ ತತ್ವಾರ ಉಂಟಾಗಿದೆ, ಆದ್ದರಿಂದ ಸರ್ಕಾರ ಬರ ತಾಲ್ಲೂಕು ಎಂದು ಘೋಷಣೆ ಮಾಡಿ ರೈತರಿಗೆ ಬೆಳೆ ನಷ್ಟಕ್ಕೆ ಸರಿಯಾದ ಸಹಾಯಧನ ನೀಡಬೇಕು, ನದಿಗಳಿಗೆ ಕುಡಿಯಲು ನೀರನ್ನು ಬಿಡುವ ಕ್ರಮತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಎಂ.ಗೋವಿಂದಪ್ಪ, ಕೆ.ಪಂಪನಗೌಡ, ಬಿ.ಉಮೇಶ, ಕೆ.ಮಸ್ತಾನಪ್ಪ, ನಾಗನಾಥಪ್ಪ, ಎಚ್.ಹಳ್ಳಪ್ಪ, ಹಂಪಯ್ಯ, ವಾ.ಹುಲುಗಯ್ಯ ಇದ್ದರು.