ಸಿರುಗುಪ್ಪ : ನಗರಸಭೆಯ ಅಧ್ಯಕ್ಷರಾಗಿ ನಾಗರಾಜ ಕಾರ್ಯಾರಂಭ

ಸಿರುಗುಪ್ಪ, ನ.5: ನಗರದ ನಗರಸಭೆಯ ನೂತನ ಅಧ್ಯಕ್ಷರಾಗಿ ಡಿ.ನಾಗರಾಜ ಅವರು ಗುರುವಾರ ಅಧಿಕಾರವನ್ನು ವಹಿಸಿಕೊಂಡರು.
ಕಛೇರಿಯಲ್ಲಿ ವಿವಿಧ ಪೂಜೆ ವಿಧಾನಗಳನ್ನು ನೆರವೇರಿಸಿ ಹಿರಿಯರು ಮತ್ತು ಕಾರ್ಯಕರ್ತರು, ನಗರಸಭೆ ಸದಸ್ಯರ ಸಮ್ಮುಖದಲ್ಲಿ ಕಾರ್ಯ ಆರಂಭಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿರುಗುಪ್ಪ ನಗರದಲ್ಲಿ 31 ವಾರ್ಡಗಳಲ್ಲಿ ಕಂಡುಬರುವ ಮೂಲಭೂತ ಸಮಸ್ಯೆಗಳನ್ನು ಪರಿಹಾರಿಸುವ ಕ್ರಮವನ್ನು ಕೈಗೊಳ್ಳುವುದು, ನಗರವನ್ನು ಅಭಿವೃದ್ದಿ ಪಥದಂತಗೊಳಿಸುವುದು, ಜನರ ಕಾರ್ಯ, ಸಾಮಾಜ ಮುಖಿಯ ಕಾರ್ಯ, ಸಾಮಾಜಸೇವೆ ಗೈಯುತ್ತ ಅಭಿವೃದ್ದಿಯನ್ನು ಮಾಡುವುದು, ಯಾವ ವಾರ್ಡನಲ್ಲಿ ಸಮಸ್ಯೆಯು ಕಂಡು ಬಂದಲ್ಲಿ ಸಿಬ್ಬಂದಿಯೊಂದಿಗೆ ಆ ಸಮಸ್ಯೆಯನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಕಾರ್ಯರೂಪಕ್ಕೆ ತರುವುದು, ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ದಟ್ಟಣೆಯ ಜನವಸತಿ ಪ್ರದೇಶಗಳಲ್ಲಿ ದೂರು ಪೆಟ್ಟಿಗೆಯನ್ನು ನಿರ್ಮಿಸುವುದು, ವಿವಿಧ ಮೂಲಭೂತ ಸೌಕಾರ್ಯಗಳಿಗೆ ಸ್ಪಂದನೆಯ ವೇಗವನ್ನು ಹೆಚ್ಚಿಸಿಕೊಳ್ಳುವುದು, ನಮ್ಮ ನಗರದ ಮಧ್ಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯು ಹಾದು ಹೋಗಿದ್ದು, ರಸ್ತೆಯ ಮಧ್ಯದಲ್ಲಿ ತಗ್ಗು ದಿನ್ನೆಗಳು ಕಂಡು ಬಂದಲ್ಲಿ ಕಾರ್ಯ ಕೈಗೊಳ್ಳಲಾಗುವುದು, ಸಾರ್ವಜನಿಕರ ಸಮಸ್ಯೆಗಳಿಗೆ ಪ್ರತ್ಯೆಕವಾದ ದೂರವಾಣಿ ಸಂಖ್ಯೆ 7019097091 ಗೆ ಕರೆ ಮಾಡಿ ತಿಳಿಸಿದಲ್ಲಿ ಅಥವಾ ವಾಟ್ಸ್‍ಪ್ ಮೂಲಕ ಸಮಸ್ಯೆಗಳನ್ನು ಚಿತ್ರ ವಿವರ ಸಹಿತ ಹಾಕಿದಲ್ಲಿ ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳುವುದು. ನಗರಸಭೆಗೆ ಇನ್ನೂ ಮುಂದೆ ಸಾರ್ವಜನಿಕರು ಕಛೇರಿಗೆ ಅಲೆದಾಡುವ ಪ್ರಕ್ರಿಯೇಯನ್ನು ನಿಲ್ಲಿಸಿ ಮನೆ ಬಾಗಿಲಿಗೆ ಅಧಿಕಾರಗಳು ಬರುವುದು ಮುಂದಿನ ದಿನಮಾನಗಳಲ್ಲಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ ಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಗೋಪಾಲರೆಡ್ಡಿ, ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ಶಿವಶಂಕರಗೌಡ, ನಗರಸಭೆಯ ಪೌರಾಯುಕ್ತ ಪ್ರೇಮ್‍ಚಾಲ್ರ್ಸ್, ಹಿರಿಯ ಮುಖಂಡ ಮುಲ್ಲಾಬಾಬು, ಕೆಂಚನಗುಡ್ಡದ ಕಾಂಗ್ರೇಸ್ ಮುಖಂಡ ಶಿವನಗೌಡ ಸೇರಿದಂತೆ ನಗರಸಭೆಯ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.