ಸಿರುಗುಪ್ಪ ನಗರಕ್ಕೆ ಬೈಪಾಸ್ ರಸ್ತೆ : ಸೋಮಲಿಂಗಪ್ಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.14: ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150 ಎ ನಿಂದಾಗಿ ಟ್ರಾಫಿಕ್ ಸಮಸ್ಯೆ ಇದ್ದು ಅದಕ್ಕಾಗಿ ನಗರಕ್ಕೆ ಬೈ ಪಾಸ್ ನಿರ್ಮಿಸಲಿದೆ ಎಂದು
ಸ್ಥಳೀಯ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.
ಅವರು ನಿನ್ನೆ ಸಂಜೆ ಸಿರುಗುಪ್ಪ ನಗರದಲ್ಲಿ  ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪ್ರಾಸ್ತಾವಿಕವಾಗಿ  ಮಾತನಾಡುತ್ತಿದ್ದರು. ರಾಜ್ಯದ ನಾಲ್ಕು ಕಡೆ ಆರಂಭವಾಗಿರುವ ವಿಜಯ‌ಸಂಕಲ್ಪ ಯಾತ್ರೆಗಳು ದಾವಣಗೆರೆಗೆ ಸೇರಲಿವೆ.
ನಮ್ಮ ಸಿರುಗುಪ್ಪ ಕ್ಷೇತ್ರದಲ್ಲಿ ಕುಡಿಯುವ ನೀರು, ರಾರಾವಿ ಸೇತುವೆ ನಿರ್ಮಾಣ ಸೇರಿದಂತೆ
800 ಕೋಟಿ ಅನುದಾನದಿಂದ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ ಎಂದು ತಿಳಿಸಿದರು.
ನಾಲ್ಕು  ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ
28 ಸರ್ಕಾರಿ ವಸತಿ ನಿಲಯಗಳಿಂದ ತಾಲೂಕಿನಲ್ಲಿ  ಶೈಕ್ಷಣಿಕ ಅಭಿವೃದ್ಧಿ ಯಾಗುತ್ತಿದೆ.
ಮುಖ್ಯ  ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಾಕಷ್ಟು ಅನುದಾನ ನೀಡಿ ಸಹಕರಿಸಿದ್ದಾರೆಂದರು.  500 ಕೋಟಿ ರೂ ವೆಚ್ಚದಲ್ಲಿ ಸಿಸಿ ರಸ್ತೆಗಳನ್ನು ಹಳ್ಳಿಗಳಲ್ಲಿ ಮಾಡಿದೆ. ಸಿರುಗುಪ್ಪ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಿಸಲಿದೆ. ನಿಟ್ಟೂರು ಬಳಿ 13 ಕೋಟಿ ರೂ ವೆಚ್ಚದಲ್ಲಿ ತುಂಗಭದ್ರ ನದಿಯ ಗೆ ಸೇತುವೆ ನಿರ್ಮಿಸಲಿದೆಂದರು.
ಕಾಂಗ್ರೆಸ್ ಒಂದು‌ಮನೆ ಮೂರು‌ಬಾಗಿಲಾಗಿದೆ. ಇದರಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲಿದೆಂಬ ವಿಶ್ವಾಸ ವ್ಯಕ್ತಪಡಿಸಿದರು.