ಸಿರುಗುಪ್ಪ ತಾಲ್ಲೂಕಿನಾದ್ಯಂತ ರಮ್ಜಾನ್ ಹಬ್ಬ ಈದುಲ್ ಫಿತ್ರ್ ಮುಬಾರಕ್

ಸಿರುಗುಪ್ಪ ಮೇ 14 : ಈದ್ ಉಲ್ ಫಿತರ್ ಎಂದರೆ ವಿಶೇಷವಾಗಿ ಸಂಭ್ರಮದ ದಿನ ಕುಟುಂಬದ ಸದಸ್ಯರು ಬಂಧು ಬಳಗ ದೊಂದಿಗೆ ಕಳೆಯುವ ದಿನ ಈ ಸುಖದಿಂದ ವಂಚಿತರಾದ ಸಂಬಂಧಿಕರು ನೆರೆ ಹೊರೆಯವರು ಬಡವರು ನಿರ್ಗತಿಕರಿಗೆ ನಮಾಜ್ ಗೆ ಹೊರಡುವ ಮುನ್ನ ಕಡ್ಡಾಯವಾಗಿ ಫಿತ್ರ್ ಝಕಾತ್ ಫಿತ್ರ್ ಸದ ಖಾ ದಾನ ನೀಡಿದರು ಸೌದಾಗರ್ ಜುಮ್ಮಾ ಸುನ್ನಿ ಮಸೀದಿ ಮೊಹಲ್ಲಾದಲ್ಲಿ 2ರಕಾತ್ ವಾಜೀಬ್ ನಮಾಜ ಪುರುಷರು ಮಹಿಳೆಯರು ಮನೆಗಳಲ್ಲಿ ನಮಾಜ್ ನಿರ್ವಹಿಸಿದರು ಮೌಲ್ವಿ ಕಾಮಿಲ್ ಜಾಮಿಯಾ ನಿಜಾಮಿಯಾ ಹೈದರಾಬಾದ್ ಮೌಲಾನಾ ಹಾಜಿ ಎಸ್ ಅಬ್ದುಲ್ ಸಮದ್ ನಿಜಾಮಿ ಅವರು ಖುತುಬಾ ಖಾನಿ ದಲ್ಲಿ ಮಾತನಾಡಿ ರಮ್ಜಾನ್ ತಿಂಗಳ ರೋಜಾ ಉಪವಾಸ ವ್ರತ ಮಾಡಿದ ಎಲ್ಲರಿಗೂ ಅಲ್ಲಾಹನು ಸ್ವರ್ಗಕ್ಕೆ ಪ್ರವೇಶಿಸುವ ಹಕ್ಕನ್ನು ನೀಡಿದ್ದಾನೆ ಅಲ್ಲಾಹನು ಪರಮ ದಯಾಳವೂ ಕರುಣಾನಿಧಿಯೂ ಶ್ರೇಷ್ಠನು ಮಹಾನನು ಅವನಿಗಿಂತ ಮಿಗಿಲಾದವರು ಯಾರೂ ಇಲ್ಲ ಎಂದು ಪ್ರವಚನದಲ್ಲಿ ಹೇಳಿದರು ಕರ್ನಾಟಕ ವಕ್ಫ್ ಮಂಡಳಿ ಬಳ್ಳಾರಿ ಜಿಲ್ಲಾ ಗೌರವ ಸದಸ್ಯರು ಜನಾಭಿಪ್ರಾಯ ಮುಖಂಡರಾದ ಹಾಜಿ ಎ ಅಬ್ದುಲ್ ನಬಿ ಖತೀಬ್ ಜಹೀರುದ್ದೀನ್ ಬಾಬು ಸೌದಾಗರ್ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ ಈದ್ಗಾ ಮತ್ತು ಖಬರಸ್ಥಾನ ಕಮಿಟಿ ಅಧ್ಯಕ್ಷ ಎಚ್ ಹಾಶಿಮ್ ಹಾಜಿ ಎ ಮೊಹಮ್ಮದ್ ಇಬ್ರಾಹಿಂ ಎ ಮೊಹಮ್ಮದ್ ರಫಿ ಎ ಮೊಹಮ್ಮದ್ ನೌಶಾದ್ ಅಲಿ ಎ ಮೊಹಮ್ಮದ್ ನಿಜಾಮುದ್ದೀನ್ ಎ ಮೊಹಮ್ಮದ್ ಹಾಜಿ ಜೆಸ್ಕಾಂ ಬಿ ಜೀಲಾನ ಇತರರು ಇದ್ದರು ಈ ಸಂದರ್ಭದಲ್ಲಿ
ಸರ್ವರಿಗೂ ಈದ್ ಉಲ್ ಫಿತ್ರ್ ಶುಭಾಶಯ ಕೋರುತ್ತಾ ಕರೋನಾ ಆತಂಕ ಬೇಡ ಮುನ್ನೆಚ್ಚರಿಕೆ ಇರಲಿ ಕರೋನಾ ಮುಕ್ತ ವಾಗಲು ಸ್ವಚ್ಛತೆ ಇರಲಿ ಮಾಸ್ಕ್ ಧರಿಸಿ ಅಂತರ ಪಾಲಿಸಿ ಸಿರುಗುಪ್ಪ ನಗರದ ಎಲ್ಲಾ ಮೊಹಲ್ಲಾಗಳು ಸೇರಿದಂತೆ ರಾರಾವಿ ದೇಶನೂರು ತೆಕ್ಕಲಕೋಟೆ ಸಿರಿಗೇರಿ ಶಾನವಾಸಪುರ ಇಬ್ರಾಹಿಂಪೂರ ಕರೂರು ಹಚ್ಚೊಳ್ಳಿ ನಾಡಂಗ ಕೆ ಬೆಳಗಲ್ಲು ಮತ್ತಿತರರ ಊರುಗಳಲ್ಲಿ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ಸರಳ ರೀತಿಯಲ್ಲಿ ವಿಶೇಷವಾಗಿ ಸಂಭ್ರಮಿಸಿದರು ಖಬರಸ್ಥಾನಗೆ ತೆರಳಿ ಜಿಯಾರತ ದರ್ಶನ ಮಾಡಿದರು.