ಸಿರುಗುಪ್ಪ ತಾಲೂಕಿನಾದ್ಯಾಂತ ಮಳೆ

????????????????????????????????????

ಸಿರುಗುಪ್ಪ ಜೂ 06 : ತಾಲೂಕಿನಾಧ್ಯಂತ ಶುಕ್ರವಾರ ಮಧ್ಯರಾತ್ರಿಯಲ್ಲಿ ಸುರಿದ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಯು ಸುರಿಯಿತು.
ನಗರದ ಕೃಷ್ಣ ನಗರದ ಮೊದಲನೇ ಕ್ರಾಸ್‍ನಲ್ಲಿ ಬರುವ ಬಿ.ಈರಣ್ಣ ಅವರ ಮೂರು ಅಂತಸ್ತಿನ ಮಹಡಿ ಮನೆಯ ಮೇಲಿನ ಗೋಡೆಯ ಭಾಗಕ್ಕೆ ಸಿಡಿಲು ಬಡಿದ ಭಾಗವು ಛಿದ್ರವಾಗಿದೆ, ರಾತ್ರಿ ವೇಳೆಯಾಗಿದ್ದರಿಂದ ಯಾವುದೇ ಪ್ರಾಣಾಪಾಯದ ಅನಾಹುತಗಳಿಲ್ಲದೆ ಕರ್ಕಶವಾದ ಶಬ್ದದೊಂದಿಗೆ ವಿದ್ಯುತ್ ಇಲ್ಲದೆ ಕತ್ತಲಿನಲ್ಲಿ ರಾತ್ರಿ ಕಳೆಯುವಂತೆಯಾಗಿತು.
ಸಿರುಗುಪ್ಪ ತಾಲೂಕಿನಲ್ಲಿ ಸಿರುಗುಪ್ಪ 15.0ಎಂ.ಎಂ, ತೆಕ್ಕಲಕೋಟೆ 4.2ಎಂ.ಎಂ., ಎಂ.ಸೂಗೂರು 7.8ಎಂ.ಎಂ., ಹಚ್ಚೋಳ್ಳಿ-19.1ಎಂ.ಎಂ., ರಾವಿಹಾಳ್-13.4ಎಂ.ಎಂ., ಕರೂರು -5.4ಎಂ.ಎಂ., ಕೆ.ಬೆಳಗಲ್ -13.2ಎಂ.ಎಂ. ಮಳೆಯಾಗಿದ್ದು, ಸಿರಿಗೇರಿ ಭಾಗದಲ್ಲಿ ಮಳೆಯಾಗದಿರುವುದು ವರದಿಯಾಗಿದೆ.
ಸಿಡಿಲು ಬಡಿದ ಅಕ್ಕಪಕ್ಕದ ಮನೆಗಳಲ್ಲಿನ ಟಿ.ವಿ. ಮತ್ತು ಫ್ಯಾನ್ ಕೆಟ್ಟು ಹೋಗಿವೆ, ಸಿಡಿಲು ಬಡಿತದಿಂದ ಕಾರುಗಳಲ್ಲಿನ ಇಂಡಿಕೇಟರ್ ದೀಪಗಳು ಶಬ್ದ ಮಾಡಿದ ಘಟನೆಯಿಂದಾಗಿ ವೃದ್ದರು, ಚಿಕ್ಕಮಕ್ಕಳು ಭಯಭೀತರಾಗಿ ರಾತ್ರಿ ನಿದ್ದೆಯಿಲ್ಲದೆ ಕಂಗಾಲಾಗಿದ್ದೆವೆ.
ಆರ್.ಮಂಜುನಾಥ ಕೃಷ್ಣ ನಗರ ಕಾಲೋನಿಯ ನಿವಾಸಿ, ಸಿರುಗುಪ್ಪ