
ಬಳ್ಳಾರಿ.ಡಿ೨೫-ಜಿಲ್ಲೆಯ ಸಿರುಗುಪ್ಪ ತಹಸಿಲ್ದಾರ್ ಅವರ ಪತ್ನಿ ಶಂಕ್ರಮ್ಮ (೪೫)ಇಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಹಸಿಲ್ದಾರ್ ಸತೀಶ್ ಬಿ. ಕೂಡಲಗಿ ಅವರು ಮನೆಯಲ್ಲಿ ಇರಲಿಲ್ಲ. ನಾಲ್ಕು ಮಕ್ಕಳು ವೇಳೆ ವಿದ್ಯಾಭ್ಯಾಸಕ್ಕೆ ಬೇರೆ ಊರಿನಲ್ಲಿ ಇದ್ದಾರೆ. ಮಾನಸಿಕ ಅಸ್ವಸ್ಥಳಾಗಿದ್ದ ಶಂಕ್ರಮ್ಮಗೆ ಕಳೆದ ೧೫ ವರ್ಷಗಳಿಂದ ಚಿಕಿತ್ಸೆ ನೀಡುತ್ತಿತ್ತು. ಆದರೂ ಸುಧಾರಿಸಿರಲಿಲ್ಲ. ಸಣ್ಣ ಪುಟ್ಟ ವಿಷಯಕ್ಕೂ ಮನಸ್ಥಾಪ ಮಾಡಿಕೊಳ್ಳಲು ಳ್ಳುತ್ತಿದ್ದ ಆಕೆ ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಯ ಪ್ಯಾನ್ ಗೆ ನೇಣುಬಿಗಿದು ಕೊಂಡಿದ್ದಾಳೆ.
ಲಿಂಗಸೂಗೂರಿಗೆ ತೆರಳಿದ್ದ ಕೂಡಲಿಗಿ ಅವರು ಬಂದ ಮೇಲೆ ಶವ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಸ್ಥಳೀಯ ಸಿರುಗುಪ್ಪ ಠಾಣೆಯಲ್ಲಿಪ್ರಕರಣ ದಾಖಲಿಸಿಕೊಂಡಿದೆ.