ಸಿರುಗುಪ್ಪ ತಹಶೀಲ್ದಾರರಿಂದ ಬೂತ್‌ಗಳ ಪರಿವೀಕ್ಷಣೆ


ಸಂಜೆವಾಣಿ ವಾರ್ತೆ
ಸಿರಿಗೇರಿ ಜ.18. ಮುಂದಿನ ಮೂರು ತಿಂಗಳಲ್ಲಿ ನಡೆಯಬಹುದೆನ್ನಲಾಗುವ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿರುಗುಪ್ಪ ತಾಲೂಕು ತಹಶೀಲ್ದಾರ್ ಮಂಜುನಾಥ್ ರವರು ದಿನಾಂಕ 16 ರಂದು ಸೋಮವಾರ ಸಿರಿಗೇರಿ ಮತ್ತು ವ್ಯಾಪ್ತಿಯ ಗ್ರಾಮಗಳಾದ ನಡವಿ, ಕೊಂಚಗೇರಿಗೆ   ಭೇಟಿ ನೀಡಿ ಈ ಹಿಂದೆ ಚುನಾವಣೆ ಸಮಯದಲ್ಲಿ ಚುನಾವಣೆ ಪ್ರಕ್ರಿಯೆಗೆ ಬಳಸಲಾಗುತ್ತಿದ್ದ ಬೂತ್ ಕೊಠಡಿಗಳನ್ನು ವೀಕ್ಷಿಸಿದರು. ಭೂತ ಕೋಠಡಿಗಳು ಈಗ ಇರುವ ಸ್ಥಿತಿ ಮುಂದೆ ಚುನಾವಣೆಯ ಭೂತಗಳನ್ನು ರಚಿಸಲು ಸೂಕ್ತವಾಗಿವೆಯೇ, ಅಥವಾ ದುರಸ್ತಿಯಲ್ಲಿವೆಯೇ ಎಂಬುದನ್ನು ಸ್ವತಹ ಪರೀಕ್ಷಿಸಿ, ಸದರಿ ಬೂತ್ಗಳಿಗೆ ನಿಯೋಜಿಸಬಹುದಾದ ಕೊಠಡಿಗಳಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಶಾಲೆಯ ಕಾರ್ಯಕರ್ತರು, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಶಿಕ್ಷಕರನ್ನು ಭೇಟಿ ಮಾಡಿ ಕೊಠಡಿಗಳ ಮಾಹಿತಿಗಳನ್ನು ಪಡೆದುಕೊಂಡರು. ಈಗಾಗಲೇ ವಿಧಾನಸಭೆ ಚುನಾವಣೆಗೆ ಪೂರ್ವಸಿದ್ಧತೆಗಳು ತಾಲೂಕಿನಲ್ಲಿ ಒಂದೊಂದಾಗಿ ನಡೆಯುತ್ತಿದ್ದು, ಅದರ ಭಾಗವಾಗಿ ತಹಸಿಲ್ದಾರ್ ರವರಿಂದ ಚುನಾವಣೆ ಪ್ರಕ್ರಿಯೆ ನಡೆಯುವ ಬೂತ್‌ಗಳ ವೀಕ್ಷಣೆ ಕಾರ್ಯ ನಡೆಯಿತು. ಸಿರಿಗೇರಿಯ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ಮತ್ತು ಕಂದಾಯ ಇಲಾಖೆಯ ಇತರೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಶಾಲೆಗಳ ಮುಖ್ಯ ಗುರುಗಳು ತಹಶೀಲ್ದಾರ್ ಅವರ ಈ ಕಾರ್ಯಕ್ಕೆ ಸಹಕಾರ ನೀಡಿ ಬೂತ್ ಕೇಂದ್ರಗಳ ಮಾಹಿತಿಗಳನ್ನು ಒದಗಿಸಿ ಕೊಟ್ಟರು. ಇದೆ ವೇಳೆ ನಡವಿ ಗ್ರಾಮದ 3 ಬೂತುಗಳನ್ನು, ಸಿರಿಗೇರಿ ಗ್ರಾಮದಲ್ಲಿ 11 ಬೂತ್ ಕೇಂದ್ರಗಳನ್ನು, ಪರಿಶೀಲಿಸಿ ತಾಸಿಲ್ದಾರರು ಮಾಹಿತಿ ಪಡೆದುಕೊಂಡರು.