ಸಿರುಗುಪ್ಪ ಟಿಕೆಟ್ ಮತ್ತೆ ಮಾಜಿ ಶಾಸಕರಿಗೆ ?


ಎನ್.ವೀರಭದ್ರಗೌಡ
ಬಳ್ಳಾರಿ, ಏ.06: ಜಿಲ್ಲೆಯ ಸಿರುಗುಪ್ಪ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮತ್ತೆ ಮಾಜಿ ಶಾಸಕ ಬಿ.ಎಂ.ನಾಗರಾಜ್ ಅವರಿಗೆ ದೊರೆಯುವ ಸಾಧ್ಯತೆಗಳು ಹೆಚ್ಚಿವೆ ಎಂದೂ ದೆಹಲಿ ಮೂಲಗಳು ಹೇಳುತ್ತಿವೆ.
ಕಳೆದ ಚುನಾವಣೆ ಮುನ್ನ‌ ನನಗೆ ಟಿಕೆಟ್ ಬೇಡ ಎಂಬ ಒಂದು ಮಾತಿನಿಂದ ಟಿಕೆಟ್ ಕಳೆದುಕೊಂಡಿದ್ದರು ನಾಗರಾಜ್, ಇದರಿಂದಾಗಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಅಳಿಯ ಮುರುಳಿ ಕೃಷ್ಣ ಅವರಿಗೆ ಅನಾಯಾಸವಾಗಿ ಟಿಕೆಟ್ ದೊರೆತಿತ್ತು. ಆದರೆ ಚುನಾವಣೆಯ ಅಂತಿಮ ದಿನಗಳಲ್ಲಿ ಚುನಾವಣೆಯ ತಂತ್ರ ಅನುಸರಿಸದೇ ಮುರುಳಿಕೃಷ್ಣ ಫೇಲ್ ಆಗಿದ್ದ ಹೀಗಾಗಿ ಎದುರಾಳಿ ಸೋಮಲಿಂಗಪ್ಪ ಗೆಲುವು ಕಂಡರು.
ನಂತರ ಕ್ಷೇತ್ರದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ   ಮುರುಳಿ ಅವರು ಸ್ಥಳೀಯ ನಗರಸಭೆ ಮತ್ತು ಪುರಸಭೆ ಚುನಾವಣೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದರು.
ಈಗ ಟಿಕೆಟ್ ಗಾಗಿ ಮಾಜಿ ಶಾಸಕ ನಾಗರಾಜ್ ಮತ್ತು ಮುರುಳಿ ಅವರ ನಡುವೆ ಪೈಪೋಟಿ ಇದ್ದು. ನಾಗರಾಜ್ ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಎಲ್ಲಾ ತಂತ್ರಗಾರಿಕೆಯ ವ್ಯವಸ್ಥೆ ಮಾಡಿಕೊಂಡಿದೆ ನನಗೆ ನೀಡಿ ಎಂದು. ಅಲ್ಲದೆ ಪಕ್ಷದ ಮುಖಂಡರ ಒತ್ತಡವೂ ಹೆಚ್ಚಾಗಿರುವುದರಿಂದ ಸಿರುಗುಪ್ಪ ಟಿಕೆಟ್ ಘೋಷಣೆಯೂ ಸಹ  ಎರಡನೇ ಪಟ್ಟಿಯಲ್ಲಿ ಅಂತಿಮವಾಗಿಲ್ಲ. ಟಿಕೆಟ್ ತರುವಲ್ಲಿ ನಾಗರಾಜ್ ಇಲ್ಲವೇ ಮುರುಳಿ ಯಾರು ಯಶಸ್ವಿಯಾಗುತ್ತಾರೋ ಎಂಬುದನ್ನು  ಕಾದು ನೋಡಬೇಕಿದೆ.
ಇತ್ತ ಟಿಕೆಟ್ ಘೋಷಣೆಯಾಗದಿದ್ದರೂ ನಾನು ಬಿಜೆಪಿ ಅಭ್ಯರ್ಥಿ ಖಚಿತ ಈ ಬಾರಿಯ ಗೆಲುವು ಸಹ  ನನ್ನದೇ ಎಂದು ಕ್ಷೇತ್ರದಲ್ಲಿ ಹಾಲಿ ಶಾಸಕ ಸೋಮಲಿಂಗಪ್ಪ ಭರ್ಜರಿ ಪ್ರಚಾರ ನಡೆಸಿದ್ದಾರಂತೆ.