ಸಿರುಗುಪ್ಪ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಷೇತ್ರದ ಅಭಿವೃದ್ಧಿ ಕಾರ್ಯಗಳೆ ಶ್ರೀರಕ್ಷೆ : ಎಂ.ಎಸ್. ಸೋಮಲಿಂಗಪ್ಪ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.12: ಕ್ಷೇತ್ರದಲ್ಲಿ ಕಳೆದ ಮೂರು ಅವಧಿಯಲ್ಲಿ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಇವೇ ನನಗೆ ಶ್ರೀರಕ್ಷೆ ಎಂದು ಶಾಸಕ ಎಂ.ಎಸ್. ಸೋಮಲಿಂಗಪ್ಪ ಹೇಳಿದರು.
ತಾಳೂರು, ಹಾಗಲೂರು ಹೊಸಳ್ಳಿ, ಶಾಸವಾಸ ಪುರ, ಕರೂರು, ದರೂರು ಗ್ರಾಮಗಳಿಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಬಳಿಕ ಮಾತನಾಡಿದ ಅವರು ಕ್ಷೇತ್ರದ ಜನರಿಗೆ ಸರ್ಕಾರದ ಹಲವಾರು ಯೋಜನೆಗಳನ್ನು ತಲುಪಿಸಿದ್ದು,  ಮತದಾರರಿಗೆ ಮನದಟ್ಟು ಮಾಡಿ ಕೊಡುವ ಕೆಲಸ ಮಾಡುತ್ತಿದ್ದೇನೆ, ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ತಂದು ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಆರ್. ಸಿ ಪೊಂಪನಗೌಡ, ಶಂಕರ ರೆಡ್ಡಿ, ಕೋಟೇಶ್ವರ ರೆಡ್ಡಿ, ಚಿರಂಜೀವಿ ರೆಡ್ಡಿ, ಶರಣಬಸವ, ದಮ್ಮಾರು ಸೋಮಪ್ಪ, ಬಿ.ಇ. ದೊಡ್ಡಯ್ಯ, ಸುಳುವಾಯಿ ಮಲ್ಲಿಕಾರ್ಜುನ, ಮಹಾದೇವ, ಗಂಗಪ್ಪ ಮುಂತಾದವರು ಇದ್ದರು.