ಸಿರುಗುಪ್ಪ ಕಾಂಗ್ರೆಸ್ ಅಭ್ಯರ್ಥಿ ಗೆಲುವು. ಕಾರ್ಯಕರ್ತರಿಂದ ವಿಜಯೋತ್ಸವ.


ಸಂಜೆವಾಣಿ ವಾರ್ತೆ
ಸಿರಿಗೇರಿ ಮೇ 13. ಸಿರುಗುಪ್ಪ ತಾಲೂಕು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಎಂ. ನಾಗರಾಜ ಅವರು  ವಿಜಯ ಸಾಧಿಸಿದ್ದಕ್ಕೆ ಸಿರಿಗೇರಿಯ ಮುಖ್ಯ ವೃತದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಬೆಳಗ್ಗೆಯಿಂದಲೇ ಟಿವಿ ಗಳ ಮುಂದೆ ಮತ್ತು ಅಲ್ಲಲ್ಲಿ ಮೊಬೈಲ್ ಗಳನ್ನು ಹಿಡಿದುಕೊಂಡು ಉಸಿರು ಬಿಗಿಹಿಡಿದು, ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಜಾತಕ ಪಕ್ಷಿಗಳಂತೆ ಆಯಾ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು  ಕಾಯುತ್ತಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಂಗ್ರೆಸ್ ಅಭ್ಯರ್ಥಿಯು 20,000 ಮತಗಳ ಅಂತರದಿಂದ ಮುನ್ನಡೆ ಇದ್ದಾಗಲೇ ಕಾಂಗ್ರೆಸ್ ಕಾರ್ಯಕರ್ತರು ಒಂದು ಸುತ್ತಿನ ವಿಜಯೋತ್ಸವವನ್ನು ಆಚರಿಸಿ. ನಂತರ ಗೆಲುವು ಖಚಿತವಾಗುತ್ತಿದ್ದಂತೆ ಪರಸ್ಪರರು ಕೈಕುಲಿಕಿ ಸಿಹಿ ವಿತರಣೆ ಮಾಡಿಕೊಂಡರು. ಬೈಕುಗಳಲ್ಲಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದು ಗ್ರಾಮದಲ್ಲಿ ಸಂಭ್ರಮದಿಂದ ಸುತ್ತು ಹಾಕಿದ್ದು ಕಂಡು ಬಂತು. ಇದೆ ವೇಳೆ ಸಿರಿಗೆರೆ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ವಿಜಯೋತ್ಸವದಲ್ಲಿ ಪಾಲ್ಗೊಂಡು ಸಂತಸವನ್ನು ಹಂಚಿಕೊಂಡರು.