ಸಿರುಗುಪ್ಪ : ಆಟೋ ಟೈರ್ ಬ್ಲಾಸ್ಟ್ 37 ಜನರಿಗೆ ಗಂಭೀರ ಗಾಯ


ಸಿರುಗುಪ್ಪ ಏ : 11 ತಾಲೂಕಿನ ತೆಕ್ಕಲಕೋಟೆ ಬಳಿ ಕೂಲಿ ಕಾರ್ಮಿಕರ ಆಟೋ ಟೈರ್ ಬ್ಲಾಸ್ಟ್ 37 ಜನರಿಗೆ ಗಾಯ, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ದಾಖಲು
ತಾಲೂಕಿನ ಅರಳಿಗನೂರು ಗ್ರಾಮದಿಂದ ಜಾಲಿಬೆಂಚೆ ಗ್ರಾಮದ ಹೊಲಗಳಲ್ಲಿ ಮೆಣಸಿನಕಾಯಿ ಕೀಳಲು ಆಟೋದಲ್ಲಿ ಹೋಗಿ ಅರಳಿಗನೂರು ಗ್ರಾಮಕ್ಕೆ ತೆರಳುತ್ತಿದ್ದಾಗ ತೆಕ್ಕಲಕೋಟೆ ಬಳಿ ರಾಷ್ಷ್ರೀಯ ಹೆದ್ದಾರಿಯಲ್ಲಿ ಆಟೋ ಬುಲೆರೊ ಟೈರ್ ಬ್ಲಾಸ್ಟ್ ಆಗಿದ್ದು ಹೋಗಿದ್ದ 50 ಜನರಲ್ಲಿ 37 ಜನರಿಗೆ ತೀವ್ರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬಳ್ಳರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.