ಸಿರುಗುಪ್ಪ:ಹಲವೆಡೆ ರಕ್ತದಾನ ಶಿಬಿರ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.01:: ಲಕ್ಷಾಂತರ ಮಕ್ಕಳಿಗೆ ಆಶ್ರಯ, ಅನ್ನ ,ಅಕ್ಷರ ನೀಡಿದ ನಡೆದಾಡುವ ದೇವರು ಎಂದೇ ಪ್ರಸಿದ್ದವಾಗಿದ್ದ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನದ ಮಹೋತ್ಸವ ಕಾರ್ಯಕ್ರಮ.
ಈ ಹಿನ್ನೆಲೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿಯ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಬಳ್ಳಾರಿ ಟಾಸ್ಕ್ ಫೋರ್ಸ್ ಸಮಿತಿ (ರಕ್ತ ಸುರಕ್ಷಿತೆ) ಬಳ್ಳಾರಿ ಇವರ ಸಮ್ಮುಖದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ತಾಲೂಕಿನ ಉಪ್ಪರಹೋಸಳ್ಳಿ ಗ್ರಾಮದ ಶಾಲಾ ಅವರಣ , ಮುದ್ದಟನೂರು, ಬೈರಾಪುರ ಗ್ರಾಮದ ಈಶ್ವರ ದೇವಸ್ಥಾನದ ಅವರಣದಲ್ಲಿ ಶ್ರೀ ಸಿದ್ದಗಂಗಾ ಮಠದ ಹಳೆ ವಿದ್ಯಾರ್ಥಿಗಳು ಹಾಗೂ ಊರಿನ ಜನರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ.ಸುನೀಲ್ ಕುಮಾರ್, ಡಾ.ವಿಜಯ್ ಕುಮಾರ್, ಎಚ್.ಐ.ಓ ಗಳಾದ ಯಂಕಪ್ಪ,ಮಾರಪ್ಪ, ಮಲ್ಲಿಕಾರ್ಜುನ , ಪಿ.ಎಚ್.ಸಿ.ಒ ಲಿಂಗಮ್ಮ ಕೆ., ಕೆ.ಎಚ್.ಪಿ.ಟಿ ವೀರೇಶ್ ಹಾಗೂ ಸಾರ್ವಜನಿಕರು ಇದ್ದರು.