ಸಿರುಗುಪ್ಪ:ಸಾಧನಾ ಸಮಾವೇಶ


ಸಂಜೆವಾಣಿ ವಾರ್ತೆ
ಸಿರಗುಪ್ಪ, ಡಿ.31: ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಬಿ.ಸಿ ಟ್ರೇಸ್ಟ್ ವತಿಯಿಂದ ಸಾಧನಾ ಸಮಾವೇಶ ಕಾರ್ಯಕ್ರಮ ನಡೆಸಲಾಯಿತು.
ಯೋಜನೆಯ ಕಾರ್ಯಕ್ರಮಗಳ ಕುರಿತು  ಜಿಲ್ಲಾ ಜನ ಜಾಗ್ರತಿ ವೇದಿಕೆ ಸದಸ್ಯರಾದ ಎನ್, ಜಿ,ಬಸವರಾಜಪ್ಪ ಮಾತನಾಡಿ ಈ ಸಂಸ್ಥೆಯ ಯೋಜನೆಗಳು ಕಾರ್ಯಕ್ರಮಗಳು ಅತ್ಯುತ್ತಮವಾದದ್ದು  ಇದರ ಸದುಪಯೋಗ ಪಡೆದುಕೊಳ್ಳಬೇಕು, ತಾಲ್ಲೂಕಿನ ಆನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತಿದ್ದರೆ
ಈ ಯೋಜನೆಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಮಹೀಳೆಯರು ಆರ್ಥಿಕವಾಗಿ ಸದೃಡವಾಗಿ ಬೆಳೆದು ಸದೃಡ ಸಮಾಜ ನಿರ್ಮಾಣ ಮಾಡಬೇಕೆಂಬುವ ಸಲುವಾಗಿ ತಾಲ್ಲೂಕಿನಲ್ಲಿ ಹಲಾವಾರು ಕಾರ್ಯಕ್ರಮ ಮಾಡುತಿದ್ದರೆ ಎಂದು ಹೇಳಿದರು.
ಯೋಜನಾಧಿಕಾರಿ  ಸುದಿರ್ ಹಂಗಳೂರು  ಮಾತನಾಡಿ ತಾಲೂಕಿನಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು ನಿಗ್ರತಿಕರಿಗೆ ಮಾಶಾಸನ  ಜಲಮಂಗಲ ಕಾರ್ಯಕ್ರಮದಡಿ  ವಿಶೇಷ ಚೇತನರಿಗೆ ಅವಶ್ಯಕ ಉಪಕರಣಗಳ ನೀಡುವುದು, ಕೆರೆ ಹೂಳೆತ್ತುವಂತವುದು, ಕೃಷಿ ಅನುದಾನ ವಿತರಣೆ ಕಾರ್ಯಕ್ರಮಗಳನ್ನು ನಡೆಸಲಾಗುತಿದ್ದೆ ಎಂದು ತಿಳಿಸಿದರು.
ಮುಖಂಡರಾದ ಮಹಾದೇವ, ಮುತ್ತಾಲಯ್ಯ ಶೆಟ್ಟಿ, ಶಿವಶಂಕರ್ ರೆಡ್ಡಿ, ವಲಯದ ಮೇಲ್ವಿಚಾರಕರು ರೂಪಾ  ಚಂದ್ರಕಲಾ, ಪ್ರಭು ಹಿರೇಮಠ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

One attachment • Scanned by Gmail